ಬಾಲಕಾರ್ಮಿಕ ಯೋಜನಾ ಸೊಸೈಟಿಯಕಾರ್ಯಕಾರಿ ಸಮಿತಿ ಸಭೆ

ಕಲಬುರಗಿ,ಜೂ 8: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ
ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಸಭೆಯು ಜಿಲ್ಲಾಧಿಕಾರಿಗಳ
ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿತು. ಸಭೆಯಲ್ಲಿಜಿಲ್ಲಾಧಿಕಾರಿಗಳು ಮಕ್ಕಳ ಸಂರಕ್ಷಣೆ ಕುರಿತು ಜಿಲ್ಲೆಯ ಅಂಕಿಅಂಶಗಳ ಕುರಿತು ಚರ್ಚಿಸಿ, ನಂತರದಲ್ಲಿ ನಗರದಲ್ಲಿ ಬಿಕ್ಷಾಟನೆಯಲ್ಲಿ ಬಹಳಷ್ಟ್ಟು ಮಹಿಳೆಯರು ಮತ್ತು ಮಕ್ಕಳು ಕಂಡು ಬರುತ್ತಿದ್ದು ಈ ಮಕ್ಕಳರಕ್ಷಣೆಯನ್ನು ಮಾಡಿ ಜಿಲ್ಲಾ ಮಕ್ಕಳ ಸಮಿತಿ ಮೂಲಕ ಮುಖ್ಯವಾಹಿನಿಗೆ ತರಬೇಕೆಂದು ಸಲಹೆ ನೀಡಿದರು. ಮಕ್ಕಳ ರಕ್ಷಣೆ ಮಾಡಿದ ನಂತರ ಮತ್ತೆ ಆ ಮಗುಅದೇ ಕೆಲಸಕ್ಕೆ ಹೋಗಲಾರದಂತೆ ಕ್ರಮವಹಿಸುವುದುಮತ್ತು ಮಕ್ಕಳ ಕುಟುಂಬಕ್ಕೆ ಸಾಮಾಜಿಕ ಭದ್ರತೆಯಸರ್ಕಾರದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿಸಂಬಂಧಪಟ್ಟ ಇಲಾಖೆಗಳು ಸಹಕರಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಮಹಮ್ಮದ ಅನ್ವರ ಹುಸೇನ ಮೊಗಲಾನಿ ಅವರು ಮಾತನಾಡುತ್ತಾ ಬಾಲಕಾರ್ಮಿಕರ ರಕ್ಷಣೆಯು
ತುಂಬಾ ಪರಿಣಾಮಕಾರಿಯಾಗಿ ಮಾಡವಂತಾಗಿದ್ದು,ಶಾಲೆಯಿಂದಹೊರಗುಳಿದ ಮಕ್ಕಳ ಮಾಹಿತಿಯನ್ನು ಪಡೆದು ಶಿಕ್ಷಣ
ಇಲಾಖೆಯವರು ಮುತವರ್ಜಿ ವಹಿಸಿ, ಸದರಿ ಶಾಲೆಯಿಂದಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ದಾಖಲಿಸಲು ಸೂಚನೆ ನೀಡಿದರು.
ಸಹಾಯಕ ಕಾರ್ಮಿಕ ಆಯುಕ್ತ್ತ ಡಾ.ಅವಿನಾಶ ನಾಯ್ಕ ಅವರು ಮಾತನಾಡುತ್ತಾ, ಕಳೆದ ಸಾಲಿನಲ್ಲಿ ನಮ್ಮ ಇಲಾಖೆ ವತಿಯಿಂದ 158 ತಪಾಸಣೆಯನ್ನು ಮಾಡಿ 2 ಪ್ರಕರಣ ದಾಖಲಿಸಿದ್ದು, ಡಿಸೆಂಬರ್ ಮತ್ತು ಮೇ
ತಿಂಗಳಲ್ಲಿ ಬಿಕ್ಷಾಟನೆ ಮಕ್ಕಳ ರಕ್ಷಣಾ ಕಾರ್ಯವನ್ನು ವಿವಿಧ ಇಲಾಖೆಯ ಸಹಯೋಗದಲ್ಲಿ ಕೈಗೊಂಡು ಒಟ್ಟು 57ಮಕ್ಕಳಲ್ಲಿ 26 ಬೀದಿಬದಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಕ್ಕಳನ್ನು ರಕ್ಷಿಸಿ ಎಲ್ಲ ಮಕ್ಕಳನ್ನು ಜಿಲ್ಲಾ ಮಕ್ಕಳ
ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಬಾಲಮಂದಿರಕ್ಕೆ ದಾಖಲಿಸಿದ್ದು,
22 ಮಕ್ಕಳ ಮಾಹಿತಿಯನ್ನು ಕಲೆಹಾಕಿ ಬಾಲಕಾರ್ಮಿಕಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳು ಕೆಲವು ನಿರ್ದೇಶನಗಳನ್ನು ಆಯಾ ಇಲಾಖೆಗಳು ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದಅಧಿಕಾರಿಗಳು, ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿಸದಸ್ಯರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಸಭೆಗೆಆಗಮಿಸಿದ ಎಲ್ಲರನ್ನು ಬಾಲಕಾರ್ಮಿಕ ಯೋಜನಾ ಸೊಸೈಟಿ, ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಅವರು ವಂದಿಸಿ ಸಭೆ ಮುಕ್ತಾಯಗೊಳಿಸಿದರು.