ಬಾಲಕಾರ್ಮಿಕ ಕಾಯ್ದೆ ಜಾಗೃತಿ: ಸಂಚಾರಿ ವಾಹನಕ್ಕೆ ಚಾಲನೆ

ಕಲಬುರಗಿ,ಮಾ 16: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ
ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬಾಲ್ಯಾವಸ್ಥೆ
ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)
ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕುರಿತು ಸಾರ್ವಜನಿಕರಲ್ಲಿ ಪ್ರಚಾರ ಹಾಗೂ ಅರಿವು ಮೂಡಿಸಲು ಕಲಬುರಗಿ ಜಿಲ್ಲಾದ್ಯಂತ ಸಂಚಾರಿ ವಾಹನ ಮೂಲಕ ಅರಿವು ಕಾರ್ಯಕ್ರಮಕ್ಕೆಹಸಿರು ನಿಶಾನೆ ತೋರಿಸುವ ಮೂಲಕ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಅವರು ಚಾಲನೆ ನೀಡಿದರು.ನಂತರ ಮಾತನಾಡುತ್ತಾ ಬಾಲ್ಯಾವಸ್ಥೆ ಹಾಗೂ
ಕಿಶೊರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ
1986 ಹಾಗೂ ತಿದ್ದುಪಡಿ 2016 ರನ್ವಯ ಎಲ್ಲಾ ಉದ್ಯೋಗ ಮತ್ತು
ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು
ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಸಂಪೂರ್ಣ ನಿಷೇಧಿಸಿದ್ದು ಹಾಗೂ 18
ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ
ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯಾವಸ್ಥೆ
ಹಾಗೂ ಕಿಶೊರಾವಸ್ಥೆ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ
ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2ವರ್ಷಗಳ ವರೆಗೆ
ಜೈಲು ಶಿಕ್ಷೆ ಅಥವಾ ರೂ. 20,000 ರಿಂದ 50,000 ರ ವರೆಗೆ ದಂಡ ಅಥವಾಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು
ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ ರೂ. 10,000
ಗಳ ದಂಡವನ್ನು ವಿಧಿಸಬೇಕಾಗಿರುತ್ತದೆ. ಭಾರತದ
ಸವೋಚ್ಛ ನ್ಯಾಯಾಲಯದ ನಿರ್ದೇಶನದ್ವಯ ತಪ್ಪಿತಸ್ಥ ಮಾಲೀಕರುತಾವು
ನಿಯೋಜನೆಗೊಂಡ ಪ್ರತಿ ಮಗುವಿಗೆ ರೂ. 20,000.ಪರಿಹಾರವನ್ನು
ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣನಿಧಿಗೆಪಾವತಿಸಬೇಕಾಗಿರುತ್ತದೆ ಎಂದರು. ಸಹಾಯಕ ಕಾರ್ಮಿಕ ಆಯುಕ್ತ ಹಾಗೂಸದಸ್ಯ ಕಾರ್ಯದರ್ಶಿ ಡಾ. ಅವಿನಾಶ ನಾಯ್ಕ ಅವರುಮಾತನಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಅವರು ಮಾತನಾಡಿ ಸಂಚಾರಿ ವಾಹನವು ಕಲಬುರಗಿಜಿಲ್ಲೆಯ ಎಲ್ಲಾ 11 ತಾಲೂಕಾದ್ಯಂತ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡ ವಾಸಿಸುವ ಸ್ಥಳಗಳಲ್ಲಿ ಸಂಚರಿಸಿ, ಶಾಲೆಯಿಂದಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿ ಶಾಲೆ ಮರಳಿ ಸೇರಿಸುವನಿಟ್ಟಿನಲ್ಲಿ ಸಾರ್ವಜಿಕರಲ್ಲಿ ಅರಿವು ಮೂಡಿಸುವ ಉದ್ದೆಶ ಹೊಂದಿದೆ. ಒಂದು ವೇಳೆ 6 ರಿಂದ 14ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾಪ್ರಕಿಯೆಗಳನ್ನು ಹಾಗೂ 18 ವರ್ಷ ವಯಸ್ಸಿನವರೆಗಿನ ಕಿಶೋರರುಅಪಾಯಕಾರಿ ಉದ್ದಿಮೆಗಳಲ್ಲಿ (ಫ್ಯಾಕ್ಟರಿ, ಮೈನ್ಸ್, ಕೇಮಿಕಲ್ಸ್ ಮತ್ತುಎಕ್ಸಪ್ಲೋಜಿವ್) ದುಡಿಯುವುದು ಕಂಡು ಬಂದಲ್ಲಿ ಚೈಲ್ಡ್ ಲೈನ್ -1098/112ಅಥವಾ 080-22453549, 08472-256295, 269347, 275278 ಈ ದೂರವಾಣಿಗೆ ಕರೆ ಮಾಡಬಹುದಾಗಿದೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್, ರವೀಂದ್ರಕುಮಾರ ಬಲ್ಲೂರ್, ಕೆ.ಎಸ್. ಪ್ರಸನ್ನ, ಪರಶುರಾಮ, ಕವಿತಾ,
ಶಿವರಾಜ ಪಾಟೀಲ್,ಕಾರ್ಮಿಕ ಇಲಾಖೆಯ ಸಿಬ್ಬಂದಿಗಳುಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.