ಬಾಲಕರ ಹಾಸ್ಟೆಲ್‍ಗೆ ಶಾಸಕ ಕರುಣಾಕರ ರೆಡ್ಡಿ ಭೂಮಿ ಪೂಜೆ

ಹರಪನಹಳ್ಳಿ ನ 21 : ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು
ಅಲ್ಪಸಂಖ್ಯಾತ ಇಲಾಖೆಯಡಿ ಬೆಂಗಳೂರು ನಿರ್ಮಿತಿ ಕೇಂದ್ರದಿಂದ 1.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಲಕರ ಹಾಸ್ಟೆಲ್‍ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಲಂಡನ್‍ ಹಳ್ಳದಲ್ಲಿ 99.95 ಲಕ್ಷ ವೆಚ್ಚದಲ್ಲಿ ಕಟ್ಟುತ್ತಿರುವ 207 ಮೀಟರ್ ಉದ್ದದ ತಡೆಗೋಡೆ (ಚರಂಡಿ) ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿ ಭೂಮಿ ಮುಂಜೂರಾತಿಗೆ ಪ್ರಾಚಾರ್ಯ ಷಣ್ಮುಖನಗೌಡ ಶಾಸಕರಿಗೆ ಮನವಿ ಮಾಡಿದರು. ಪಕ್ಕದಲ್ಲಿಯೇ ಜಾಗವಿದ್ದು, ಪರಿಶೀಲನೆ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜಿಗೆ ಕೊಡುವಂತೆ ಶಾಸಕ ಕರುಣಾಕರ ರೆಡ್ಡಿ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದರು
ಉಪವಿಭಾಗಾಧಿಕಾರಿ ಪ್ರಸನ್ನ
ಕುಮಾರ್, ತಹಶೀಲ್ದಾರ್‌ ಅನಿಲ್‍ ಕುಮಾರ, ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ.ಕೆ. ಕುಮಾರ್, ಪಿಎಸ್ಐ ಸಿ.ಪ್ರಕಾಶ್ , ಎಇಇ ಲಿಂಗರಾಜ್, ಎಇ ಅಶೋಕ್, ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್,ಯು.ಪಿ. ನಾಗರಾಜ್, ರಾಘವೇಂದ್ರ ಶೆಟ್ಟಿ, ಅಂಜಿನಪ್ಪ, ಆರ್.ಲೋಕೇಶ್, ಸಂತೋಷ್, ಅಶೋಕ, ಸಣ್ಣಹಾಲಪ್ಪ, ಇತರರು ಇದ್ದರು.