ಬಾಲಕರ ಸಾವು-ಕುಟುಂಬಕ್ಕೆ ಪರಿಹಾರ

ದೇವನಹಳ್ಳಿ, ಜೂ.೨೪-ಇತ್ತಿಚಿಗೆ ಕೆರೆಯಲ್ಲಿ ಮುಳಗಿ ಮೂರು ಬಾಲಕರು ಮೃತಪಟ್ಟಿದ್ದರು. ಮೃತ ಬಾಲಕರಾದ ಕಾರ್ತಿಕ್, ಧನುಷ್ ಮತ್ತು ಗುರುಪ್ರಸಾದ್ ಮನೆಗಳಿಗೆ ಮಾಜಿ ಸಂಸದರಾದವೀರಪ್ಪ ಮೊಯ್ಲಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ಹೇಳಿದರು.
ವೈಯಕ್ತಿಕ ಒಂದೊಂದು ಕುಟುಂಬಕ್ಕೂ ತಲಾ ೨೫ಸಾವಿರದಂತೆ ಮೃತ ಒಂದೊಂದು ಕುಟುಂಬಕ್ಕೆ ೫೦೦೦೦ ಸಾವಿರ ರೂಗಳ ಮೊತ್ತವನ್ನು ವಿತರಿಸಿದರು. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಸ್ಥರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇದೇ ವೇಳೆ ಕೆಪಿಸಿಸಿ ಕಾರ್ಯದರ್ಶಿ ದ್ಯಾವರಹಳ್ಳಿ ಶಾಂತಕುಮಾರ್,ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್,ರಾಮಚಂದ್ರಪ್ಪ,ವಿ ಮಂಜುನಾಥ್, ಯಲುವಳ್ಳಿ ನಟರಾಜು, ಬಿವಿ ಕೃಷ್ಣಪ್ಪ, ವಿಜಯಪುರ ಪುರಸಭೆಯ ಕಾಂಗ್ರೆಸ್ ಸದಸ್ಯರು ಈ ವೇಳೆ ಇದ್ದರು.