ಬಾಲಕನ ಸಾವು

ಮರಿಯಮ್ಮನಹಳ್ಳಿ, ಮೇ.31:  ಎಮ್ಮೆ ಮೇಯಿಸಲು ಹೋದ ಬಾಲಕ ಹಳ್ಳದ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಪಟ್ಟಣಕ್ಕೆ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ತಿಮ್ಮಲಾಪುರ ಗ್ರಾಮದ ತಿರುಪತಿ(13) ಎಂದು ಗುರುತಿಸಲಾಗಿದೆ. ಬಾಲಕನು ಎಮ್ಮೆ ಮೇಯಿಸಲು ಹೋದಾಗ ಎಮ್ಮೆಯು ಜಾಲಿಕುಂಟೆ ಹಳ್ಳದ ನೀರಿನ ಕಡೆ ಹೊರಟಿದೆ. ಎಮ್ಮೆಯು ಅದರಲ್ಲಿ ಮುಳುಗುವ ಭೀತಿಯಿಂದ ಎಮ್ಮೆಗೆ ಕಟ್ಟಿದ ಹಗ್ಗವನ್ನು ಗಟ್ಟಿಯಾಗಿ ಹಿಡಿದಿದ್ದು, ಅದು ನೀರೊಳಗೆ ಹೋದಾಗ ಬಾಲಕನೂ ನೀರಿಗೆ ಬಿದ್ದಿದ್ದಾನೆ. ಈಜು ಬಾರದೇ ಇರುವುದರಿಂದ ಬಾಲಕ ಜಾಲಿಕುಂಟೆ ಹಳ್ಳದಲ್ಲಿ ಮುಳುಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮರಿಯಮ್ಮನಹಳ್ಳಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.