ಬಾಲಕನ ರಂಜಾನ್ ಆಚರಣೆ

ದಾವಣಗೆರೆ, ಏ. 19;  ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾದ ಮೊಹಮ್ಮದ್ ಜಿಕ್ರಿಯಾ ಹಾಗೂ ತಬಸ್ಸುಮ್ ಕೌಸರ್ ಅವರ ಪುತ್ರ 5 ವರ್ಷದ ಮೊಹಮ್ಮದ್ ಅಯಾನ್  ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಇದೇ ಮೊದಲಬಾರಿಗೆ ದಿನವೊಂದಕ್ಕೆ 13 ಘಂಟೆಗಳಂತೆ ಸತತ 5 ದಿನಗಳ ಕಾಲ ಯಶಸ್ವಿಯಾಗಿ ರೋಜಾ (ಉಪವಾಸ)ವನ್ನು ಪೂರೈಸಿದ್ದು ದೇಶದ ರೈತರ ಹೋರಾಟಕ್ಕೆ ಶುಭವಾಗಲಿ ಹಾಗೂ ಪ್ರಪಂಚಕ್ಕೆ ಅಂಟಿರುವ ಮಹಾಮಾರಿ ಕೊರೊನಾ ದೂರವಾಗಿ ಎಲ್ಲರು ಸುಖ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ದಯಾಮಯನಾದ ಅಲ್ಲಾಹ್‌ನಲ್ಲಿ ಪ್ರಾರ್ಥಿಸಿದ್ದಾರೆ.ಈ ಮಗುವಿಗೆ  ಅಲ್ಲಾಹ್‌ನು, ಆರೋಗ್ಯ, ವಿದ್ಯೆ, ಬುದ್ಧಿ ಹಾಗೂ ಅವನ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸು ನೀಡಲಿ ಎಂದು ಆತ್ಮೀಯರಾದ ಲಿಯಾಖತ್ ಅಲಿ, ಮಹಬೂಬ್ ಬಾಷಾ, ರಿಯಾಜುದ್ದೀನ್ ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.