ಬಾಲಕನ ಮೇಲೆ ಹಂದಿಗಳ ದಾಳಿ

ವಿಜಯಪುರ ಏ 25 : ಮನೆಯ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಹಂದಿಗಳು ದಾಳಿಗೈದಿರುವ ಘಟನೆ ವಿಜಯಪುರದ ರಹೀಂನಗರದಲ್ಲಿ ನಡೆದಿದೆ.
ಅಬುಝರ್ ಶಿವಣಗಿ(5) ಎಂಬ ಬಾಲಕನನ್ನು ಐದಾರು ಹಂದಿಗಳು ಕಚ್ಚಿ ಗಂಭೀರವಾಗಿ ಗಾಯ ಮಾಡಿವೆ. ಹಂದಿಗಳು ದಾಳಿ ಮಾಡುತ್ತಿದ್ದಾಗ ಪಾಲಕರು ಓಡಿ ಹೋಗಿ ಹಂದಿಗಳ ದಾಳಿಯಿಂದ ರಕ್ಷಣೆ ಮಾಡಿದ್ದಾರೆ. ಅಬುಝರ್ ತಲೆಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದಕ್ಕಾಗಿ ಮಹಾನಗರ ಪಾಲಿಕೆ ವತಿಯಿಂದ ಹಂದಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.