ಬಾಲಕನಿಂದ ನಾಲ್ವರ ಹತ್ಯೆ

ಅಗರ್ತಲಾ, ನ.೭- ೧೫ ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಕೊಲೆ ಗೈದಿರುವ ಭೀಕರ ಘಟನೆ ತ್ರಿಪುರ ರಾಜ್ಯದ ದುರೈ ಶಿಬ್ ಬರಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಾದಲ್ ದೇಬನಾಥ್ (೭೦), ಸುಮಿತಾ ದೇಬನಾಥ್ (೩೨), ಸುಪರ್ಣಾ ದೇಬನಾಥ್ (೧೦) ಮತ್ತು ರೇಖಾ ದೇಬ್ (೪೨) ಎಂದು ಗುರುತಿಸಲಾಗಿದೆ.

ಕಮಲಾಪುರ ಪೊಲೀಸ್ ಠಾಣೆ ಸಿಬ್ಬಂದಿಗೆ ರಾತ್ರಿ ೧೧ ಗಂಟೆ ಸುಮಾರಿಗೆ ಮನೆಯೊಂದರ ಹೊರ ಹೊಂಡದಿಂದ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿತು. ಆಗ ಸ್ಥಳಕ್ಕಾಗಮಿಸಿ ಅಗೆದು ಪರಿಶೀಲಿಸಿದಾಗ ಒಟ್ಟು ನಾಲ್ಕು ಶವಗಳು ಪತ್ತೆಯಾಗಿವೆ.

ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ.ಎಲ್ಲರೂ ಒಂದೇ ಕುಟುಂಬದಾಗಿದ್ದಾರೆ. ಆರೋಪಿ ಅಪ್ರಾಪ್ತ ನಾಗಿದ್ದು, ಪೊಲೀಸರ ವಶದಲ್ಲಿದ್ದಾನೆ ಎಂದು ಕಮಲಾಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ರಮೇಶ್ ಯಾದವ್ ತಿಳಿಸಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೦೨ ಮತ್ತು ೨೦೧ ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.