ಬಾರ್ ಪ್ರಾರಂಭಕ್ಕೆ ವಿರೋಧ

ಬೆಂಗಳೂರು ಏ.೭ : ಚಿಕ್ಕಗೊಲ್ಲರಹಟ್ಟಿಯಲ್ಲಿ ವಿವಾದದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಏಕಾಏಕಿ ಮಾಡಿರುವುದರ ವಿರುದ್ಧ ನಾಗರೀಕರು,ಮಹಿಳೆಯರು ಪ್ರತಿಭಟನೆ ನಡೆಸಿದರು.
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ತೆರೆದಿರುವ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ದೇವಸ್ಥಾನ,ಶಾಲೆ, ಶುದ್ದಕುಡಿಯುವ ನೀರು, ಗಾರ್ಮೆಂಟ್ಸ್,ಕಾರ್ಖಾನೆಗಳು ಇರುವುದರಿಂದ ಯಾವುದೇ ಕಾರಣಕ್ಕೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಬಾರದೆಂದು ಗ್ರಾಮಸ್ಥರು ಆಗ್ರಹಿಸಿದ್ದರು.
ಗ್ರಾಮಪಂಚಾಯತಿ ಬಿಜೆಪಿ ಸದಸ್ಯರಾದ ಕೋಮಲ,ಸಾವಿತ್ರಿ ಮತ್ತಿತರರು ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಜನವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಬಾರದು ಎಂದು ನಾಗರೀಕರೂ,ಗ್ರಾಮಪಂಚಾಯತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಅಬಕಾರಿ,ಪೋಲೀಸ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪಂಚಾಯತಿ ತೀರ್ಮಾನಕ್ಕೂ ಕವಡೆ ಕಾಸಿನ ಬೆಲೆಯಿಲ್ಲ,ಬಾರ್ ಮಾಲೀಕರಾಗಿ ಕೈಗೊಂಬೆಯಾಗಿ ಅಬಕಾರಿ ಮತ್ತು ಪೋಲೀಸ್ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ.ಬಿಜೆಪಿ ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದರೂ ಸಹ ಜನಪ್ರತಿನಿಧಿಗಳು, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಹೆಸರನ್ನೇಳದ ಬಿಜೆಪಿ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಬಾರ್ ಮಾಲೀಕರು ಏಕಾಏಕಿ ಬಾರ್ ಅಂಡ್ ರೆಸ್ಟೋರೆಂಟ್ ಅಂಗಡಿ ಬಾಗಿಲು ತೆಗೆಯುತ್ತಿದ್ದಂತೆ ಮಹಿಳೆಯರು ಪ್ರತಿಭಟನೆಯ ಮೂಲಕ ಬಾರ್ ಮಾಲೀಕರ ಕ್ರಮವನ್ನು ಖಂಡಿಸಿದರು.
ಚಿತ್ರ ೧: ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ವಿವಾದದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಏಕಾಏಕಿ ಪ್ರಾರಂಭ ಮಾಡಿರುವುದರಿಂದ ಸ್ಥಳೀಯ ನಾಗರೀಕರು,ಮಹಿಳೆಯರು ಪ್ರತಿಭಟನೆ ನಡೆಸಿದರು.
ಚಿತ್ರ ೨ : ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ವಿವಾದದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಕೊಡಿಗೇಹಳ್ಳಿ ಗ್ರಾಮಪಂಚಾಯತಿಯಿಂದ ಗೋಡೆಗೆ ತಿಳುವಳಿಕೆ ಪತ್ರ ಅಂಟಿಸಿರುವುದು.