ಬಾರ್ ಗಳ ಮುಂದೆ ಮದ್ಯಪ್ರಿಯರ ಕ್ಯೂ…

ಜಗಳೂರು.ಏ.೨೭ : ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಕಳೆದ ಎರಡುದಿನಗಳಿಂದ ವಿಧಿಸಲಾಗಿದ್ದ ವಿಕೇಂಡ್ ಕರ್ಪ್ಯೂ ಮುಗಿದ ನಂತರ ಪೋಲಿಸ್ ಇಲಾಖೆವರು ಬಾರ್ ಗಳನ್ನು ಬಿಟ್ಟು ಉಳಿದ ಅಂಗಡಿಗಳನ್ನು ಬೆಳಗ್ಗೆಯಿಂದಲೇ ಬಂದ್ ಮಾಡಿಸಿದರು, ವಿಕೇಂಡ್ ಕರ್ಪ್ಯೂ  ಮುಗಿದ ನಂತರ ಪೋಲಿಸ್ ಇಲಾಖೆಯಿಂದ ಬೆಳಗ್ಗೆ ಯಿಂದಲೇ ದಿನಸಿ ಅಂಗಡಿ , ತರಕಾರಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು ಆದರೆ ಬಾರ್ ಗಳನ್ನು ಮಾತ್ರ ತೆರೆಯಲು ಅವಕಾಶ ನೀಡಿದ್ದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಯಿತು.ಕೋವಿಡ್ ನಿಯಮ ಪಾಲಿಸದೇ ಬಾರ್ ಗಳ ಮುಂದೇ ಮದ್ಯ ಪ್ರಿಯರು ಗುಂಪು ಗುಂಪಾಗಿ ಸೇರಿದ್ದರು ಯಾರು ಕೂಡ ಕೋವಿಡ್ ನಿಮಯಗಳನ್ನು ಪಾಲಿಸಲಿಲ್ಲ ಕೆಲವರು ಪಾರ್ಸಲ್ ತೆಗೆದು ಕೊಂಡು ಹೊಗುತ್ತಿದ್ದದ್ದು ಕಂಡುಬಂದಿದೆ.