ಬಾರ್ ಅಂಗಡಿ ಬಂದ್ ಮಾಡಿ ಪ್ರತಿಭಟನೆ


ನವಲಗುಂದ, ಮಾ 24: ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ಬಾರ್ ಅಂಗಡಿ ಪ್ರಾರಂಭವಾಗಿದ್ದರಿಂದ ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಹಾಗೂ ಗ್ರಾಮದ ಮಹಿಳೆಯರು ಮಂಗಳವಾರ ರಾತ್ರಿ ಬಾರ್ ಅಂಗಡಿಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು.
ರೈತಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಮಾತನಾಡಿ, ಸಿರಾಯಿ ಮಾರಾಟವನ್ನು ಗ್ರಾಮದಲ್ಲಿ ಮಾರಾಟ ಮಾಡಬಾರದು ಎಂದು ಮೇಲಿಂದ ಮೇಲೆ ತಹಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಾ ಬಂದರೂ, ಈಗ ತಿರ್ಲಾಪೂರ ಗ್ರಾಮದಲ್ಲಿ ಬಾರ್ ಅಂಗಡಿಯ ಪರವಾನಗಿ ನೀಡಿರುವುದನ್ನು ಖಂಡಿಸುತ್ತೇವೆ. ಬಾರ್ ಅಂಗಡಿಯಿಂದ ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದ ತಂದೆ ತಾಯಿಗಳು ತಮ್ಮ ಮಕ್ಕಳು ಭವಿಷ್ಯ ಹಾಳಾಗುತ್ತಿರುವುದನ್ನು ಖಂಡಿಸಿ ತಕ್ಷಣ ಅಂಗಡಿ ಬಂದ್ ಮಾಡಿ ಗ್ರಾಮದಲ್ಲಿ ಬಾರ್ ಅಂಗಡಿಯನ್ನು ರದ್ದುಮಾಡಿ ಸರಾಯಿ ಮುಕ್ತಗೊಳಿಸಬೇಕೆಂದು ಹೇಳಿದರು.
ರೈತ ಕುಟುಂಬಗಳು ಹಾಗೂ ಯುವಕರು ಜೀವನ ಹಾಳಗುತ್ತವೆ. ಬಾರ್ ಅಂಗಡಿ ಮಾಲಿಕರ ಲಾಭಕ್ಕಾಗಿ ಸಾರಾಯಿ ಮಾರಾಟ ಮಾಡಿ ಗ್ರಾಮದ ಪರಿಸರವನ್ನು ಹಾಳು ಮಾಡುತ್ತಿರುವುದು ಖಂಡನೀಯವೆಂದು ಆರೋಪಿಸಿದರು.
ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಸಿ.ಪಿ.ಐ, ಪಿ.ಎಸ್.ಐ ಹಾಗೂ ಅಬಕಾರಿ ಇಲಾಖೆ ಸಿಬ್ಬಂಧಿಗಳು ಆಗಮಿಸಿ ಪ್ರತಿಭಟನೆಗಾರರ ಮನವೊಲಿಸುವ ಪ್ರಯತ್ನ ಮಾಡಿದರು. ಬಾರ್ ಅಂಗಡಿ ಲೈಸನ್ಸ್ ರದ್ದುಗೊಳಿಸುವವರಿಗೂ ನಮ್ಮ ಪ್ರತಿಭಟನೆ ಹಿಂಬಡೆಯುವುದಿಲ್ಲವೆಂದು ಸ್ಥಳದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅಶೋಕ ಮಂಕಣಿ, ಲಕ್ಷ್ಮಣ ವಾಲ್ಮೀಕಿ, ಬಸವರಾಜ ಕಂಬಳಿ, ಮಾಹಂತೇಶ ಕುಂದಗೋಳ, ಸಿದ್ಲಿಂಗಪ್ಪ ಮರೇವಾಡ, ಮಂಜುಳಾ ಕುಸುಗಲ್ಲ, ವಿಜಯಕ್ಷ್ಮೀ ಮೊರಬದ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.