ಬಾರಿಸು ಕನ್ನಡ ಡಿಂಡಿಮದಲ್ಲಿ ಸಾಂಸ್ಕೃತಿಕ ಕಲರವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.16: ಅಕ್ಟೋಬರ್ 16: ನಗರದ ರಾಘವ ಕಲಾ ಮಂದಿರದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ, “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮದ ನಿಟ್ಟಿನಲ್ಲಿ  ಇಲ್ಲಿನ ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್  ರಾಘವ ಕಲಾ ಮಂದಿರದಲ್ಲಿ ನಿನ್ನೆ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ಡಾ.ನೈನಾ ವರ್ನೇಕರ್  ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು  “ನಮ್ಮ ದೇಶದ ಭವ್ಯ ಪರಂಪರೆಯ ಸಂಸ್ಕೃತಿ ಕಲೆ ವೈಭವ ಬೆಳೆಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಎಂದರು.
ಎಚ್.ಎನ್.ಅನುರಾಧ ಮಾತನಾಡಿ, ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಲು ಸಂಗೀತ, ನೃತ್ಯ ಕಲೆಗಳಲ್ಲಿ ತೊಡಗಿಸಬೇಕೆಂದರು.
ತೀರ್ಪುಗಾರರಾಗಿ ಡಾ.ವೀಣ, ಡಿ.ಇಂದ್ರಾಣಿ ಹಾಗೂ ಅಂಜಲಿ ಹೊಸಪೇಟಿ ಆಗಮಿಸಿದ್ದರು.  78 ಎಕವ್ಯಕ್ತಿ ಮತ್ತು ಸಮೂಹ ನೃತ್ಯಗಳನ್ನು ಪ್ರಸ್ತುತ ಪಡಿಸಲಾಯಿತು, ಅದರಲ್ಲಿ 23 ನೃತ್ಯಗಳನ್ನು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಸುಮಾ ನಾಡಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಭಾಷಣ ಸ್ಪರ್ಧೆಯನ್ನು ಯೋಗಾ ನಾಗರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಅವರು ಉದ್ಘಾಟಿಸಿ, ಭಾರತದ ಸಂಸ್ಕೃತಿ ನಾಡು ನುಡಿಯ ಬಗ್ಗೆ ತಿಳಿಸಿದರು. ಡಾ.ಸುಮ.ವೈ, ಡಾ.ಮಂಜುನಾಥ,ಎಸ್, ಡಾ.ಫಣೀಂದ್ರ ರೆಡ್ಡಿಯವರು ತೀರ್ಪುಗಾರರಾಗಿದ್ದರು. 40 ಸ್ಪರ್ಧಿಗಳು ಭಾರತದ ವೈವಿಧ್ಯಮ ಸಂಸ್ಕೃತಿ ಹಾಗೂ ಅದರ ಸಂರಕ್ಷಣೆ ಮತ್ತು ಮಾತೃ ಭಾಷೆ ಉಳಿಸುವಲ್ಲಿ ನನ್ನ ಪಾತ್ರ ಎನ್ನುವ ವಿಷಯಗಳ ಬಗ್ಗೆ ಭಾಷಣ ನೀಡಿದರು.
ಸ್ಮಿಯಾಕ್ ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿ, ಸುಧೀಂದ್ರ ನಾಡಿಗಾರ್, ಕೆ ತಿಪ್ಪೇರುದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು. ಹಬೀಬ, ಕೈಸರ್ ಪ್ರಾರ್ಥಿಸಿದರು. ವಿಜಯಕುಮಾರ್ ನಿರೂಪಿಸಿದರು.