ಬಾರಕೋಲ್ ಹೆಗಲಿಗೆ ಹಾಕಿ ಎತ್ತಿನ ಬಂಡಿ ಓಡಿಸಿದ ಡಾ.ಅಜಯ್ ಸಿಂಗ್

ಜೇವರ್ಗಿ,ಏ.2-ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಭೀಮಾ ನದಿ ದಂಡೆಯಲ್ಲಿರುವ ಕೋನಾ ಹಿಪ್ಪರಗಾ ಗ್ರಾಮದಲ್ಲಿನ ತಮ್ಮ 3 ನೇ ಗ್ರಾಮ ವಾಸ್ತವ್ಯದಲ್ಲಿ ರೈತರಾದ ಅಪ್ಪಾರಾವ ಇವರ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಎತ್ತಿನ ಬಂಡಿ ಓಡಿಸಿ ಗಮನ ಸೆಳೆದರು.
ತಾವೇ ಬಾರಕೋಲ್ ಹಿಡಿದು ಎತ್ತುಗಳನ್ನು ಬಂಡಿಗೆ ಹೂಡಿ ಒಂದೇ ಸವನೆ 2 ರಿಂದ 3 ಕಿಮೀ ಬಂಡಿ ಓಡಿಸಿ ಹರುಷ ಪಟ್ಟರು. ರೈತರು ಸಹ ಎತ್ತಿನ ಬಂಡಿಯಲ್ಲಿ ಡಾ. ಜಯ್ ಸಿಂಗ್ ಜೊತೆಗಿದ್ದು ಅವರಿಗೆ ಒಕ್ಕಲುತನದ ಮಾಹಿತಿ ನೀಡಿದರು. ಇದು ತಮ್ಮ ಹೊಸ ನುಭವ ಎಂದ ಡಾ. ಅಜಯ್ ಸಿಂಗ್ ವಾಸ್ತವ್ಯದೊಂದಿಗೆ ರೈತರ ಬದುಕು- ಬವಣೆ ಹತ್ತಿರದಿಂದ ನೋಡಲು ತಮಗೆ ಅವಕಾಶ ಸಿಕ್ಕಂತಾಗಿದೆ ಎಂದರು.