
ವಿಜಯಪುರ,ಮಾ 5: ಬಬಲೇಶ್ವರ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಪಶ್ಚಿಮ ಬಂಗಾಲ ಮೂಲದ ಸಂದೀಪ ಮಂಡಳ (21) ಮೃತ ಕಾರ್ಮಿಕ. ಶನಿವಾರ ಬಬಲೇಶ್ವರ ಪಟ್ಟಣದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ ಸ್ಫೋಟಗೊಂಡು, ಐವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿದ್ದರು.ಇವರಲ್ಲಿ ಪರಸನಜೀತ ಮಂಡಳ, ರಾಜಕುಮಾರ ರಾಮ್ ಎಂಬುವವರ ಸ್ಥಿತಿ ಗಂಭೀರವಾಗಿದೆ. ಇಮ್ರಾನ್ ಅನ್ಸಾರಿ, ಅಶೊಕಕುಮಾರ ರಾಮ ಎಂಬುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಬಲೇಶ್ವರ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.