
ದಾವಣಗೆರೆ. ಮಾ.೧೦; ವಸಡು ಆರೋಗ್ಯ ಸಂಪೂರ್ಣ ದೇಹದ ಆರೋಗ್ಯದ ಒಂದು ಅಂಶ ಎಂದು ಡಾ.ನೀತು ಸಿ ಅಣ್ಣಿಗೇರಿ ಸಲಹೆ ನೀಡಿದ್ದಾರೆ.ನಗರದ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಅವರು ಹಲ್ಲಿನ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ವಸಡು ರೋಗ ಅಥವಾ ಪೆರಿಯೊಡಾನ್ ಟೈಟಿಸ್ ಒಂದು ರೀತಿಯ ಬ್ಯಾಕ್ಟೀರಿಯಲ್ ರೋಗವಾಗಿದ್ದು ವಸಡು ಮತ್ತು ಹಲ್ಕಿನ ಸುತ್ತಲಿನ ಮೂಳೆಯನ್ನು ಹಾಳುಮಾಡಿ ಹಲ್ಲನ್ನು ಸಡಿಲಗೊಳಿಸುತ್ತದೆ.ಹಲ್ಲುಗಳಷ್ಟೇ ಅಲ್ಲದೇ ಹೃದಯರೋಗ,ಸಕ್ಕರೆ ಕಾಯಿಲೆ ಹಾಗೂ ಶ್ವಾಸಕೋಶದ ಕಾಯಿಲೆಗಳೂ ಕೂಡ ಕಾಣಿಸಿಕೊಳ್ಳಬಹುದು.ವಸಡು ಆರೋಗ್ಯ ಹಾಗೂ ಸಂರಕ್ಷಣೆ ಅತೀ ಮುಖ್ಯವಾದದ್ದು ವಸಡು ಆರೋಗ್ಯ ಸಂರಕ್ಷಣೆ ಮಾಡುವ ವಿಧಾನಗಳೆಂದರೆ ದಿನ ಹಲ್ಲುಜ್ಜುವುದು,ಫ್ಲಾಸಮಗ್ ಮಾಡುವುದು,ದಂತ ವೈದ್ಯರನ್ನು ಭೇಟಿಯಾಗಿ ಹಲ್ಲು ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.ವಸಡು ಆರೋಗ್ಯ ಸಂರಕ್ಷಣೆ ,ತಪಾಸಣೆ ಹಾಗೂ ಚಿಕಿತ್ಸೆ ನೀಡಿ ಹಲ್ಲಿನ ಹಾಗೂ ಸಂಪೂರ್ಣ ಆರೋಗ್ಯದ ಕಾಳಜಿ ಬಗ್ಗೆ ಗಮನಹರಿಸಬೇಕು. ಬಾಯಿ ಆರೋಗ್ಯ ಸಂಪೂರ್ಣ ಆರೋಗ್ಯದ ಕನ್ನಡಿ ಆದ್ದರಿಂದ ಹಲ್ಲು ಹಾಗೂ ವಸಡು ಆರೋಗ್ಯ ಅತೀ ಮುಖ್ಯ ಎಂದಿದ್ದಾರೆ.