ಬಾಯಿ ಆರೋಗ್ಯದಿಂದ ದೇಹದ ಆರೋಗ್ಯ ಸಾಧ್ಯ

ಕಲಬುರಗಿ:ಫೆ.23: ಸಾಮಾನ್ಯವಾಗಿ ಯಾವುದೇ ಕಾಯಿಲೆಗಳ ಲಕ್ಷಣಗಳು ಕಂಡುಬಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಬಾಯಿಯನ್ನು ಪರಿಶೀಲಿಸುವರು. ಹಲ್ಲುಗಳು, ನಾಲಿಗೆ, ಗಂಟಲು ಸೇರಿದಂತೆ ಬಾಯಿಯ ಆರೋಗ್ಯದಲ್ಲಿ ಏರು-ಪೇರಾದಾಗ ಅದರ ಪರಿಣಾಮ ದೇಹದ ಇತರೆ ಭಾಗಗಳಿಗೆ ಕೂಡಾ ಆಗುತ್ತದೆ. ಆದ್ದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ಯುಪಿಎಚ್‍ಸಿಯ ಆವರಣದಲ್ಲಿ ಆರೋಗ್ಯ ಜಾಗೃತಿಯ ಗೋಡೆ ಬರಹದ ಚಿತ್ರಗಳ ಅನಾವರಣ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದವರಿಗೆ ವಿವರಿಸುತ್ತಾ ಅವರು ಮಾತನಾಡುತ್ತಿದ್ದರು.
ಹಲ್ಲುಗಳ ರಕ್ಷಣೆಗ ದಿನಕ್ಕೆ ಎರಡು ಸಲ ಬ್ರಷ್ ಮಾಡಿ. ಹಲ್ಲುಗಳಲ್ಲಿ ಚೂಪಾದ ವಸ್ತುಗಳನ್ನು ಹಾಕಬಾರದು. ಗುಟಕಾ, ಧೂಮಪಾನ ಸೇವನೆ ಬೇಡ. ಹಲ್ಲುಗಳು, ನಾಲಿಗೆ, ಗಂಟಲಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ ಉಗಳಬೇಕು. ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಜಂಕ್ ಪುಡ್, ಎಣ್ಣೆಯಲ್ಲಿ ಕರಿದ, ಹುರಿದ ಆಹಾರ ಸೇವನೆ ಮಾಡಬೇಬಾರದು. ಬಾಯಿಯ ಆರೋಗ್ಯದಲ್ಲಿ ಏನಾದರು ತೊಂದರೆ ಕಂಡುಬಂದರೆ ತಜ್ಞ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಮದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ ಸೇರಿದಂತೆ ಮತ್ತಿತರರಿದ್ದರು.