ಬಾಯಿದೊಡ್ಡಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸನ್ಮಾನ

ರಾಯಚೂರು.ಮಾ.೩೧- ಸರ್ಕಾರಿ ಪ್ರೌಢ ಶಾಲೆ ಬಾಯಿದೊಡ್ಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ರವರಿಗೆ ಶಾಲೆಯವತಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಬಸವರಾಜ ರವರು ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಈ ಒಂದು ಶಾಲೆ ಉತ್ತಮ ಶಾಲೆ ಉತ್ತಮ ಪರಿಸರ ಶಾಲೆ ಎಂದು ಹೆಸರು ಮಾಡಿದೆ. ಮಕ್ಕಳಿಗೆ ಉತ್ತಮ ಕಲಿಕೆ ನೀಡುವ ತಂಡ ಈ ಶಾಲೆ ಯಲ್ಲಿದೆ.
ಈ ಶಾಲೆ ಇನ್ನು ಹೆಚ್ಚಿನ ಉತ್ತಮ ಶಾಲೆ ಎನಿಸಿ ಕೊಳ್ಳಲು ಶಾಲೆಯ ಮಕ್ಕಳಿಗೆ ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯ ಆಟದ ಮೈದಾನಕ್ಕೆ ನಿಮ್ಮ ಗ್ರಾಮ ಪಂಚಾಯತ್ ವತಿಂದ ಒದಗಿಸಲು ಯೋಜನೆ ರೂಪಿಸಿ ಸೌಲಭ್ಯಗಳನ್ನು ಒದಗಿಸಬೇಕೆಂದು ಕೋರಿದರು.
ಅಧ್ಯಕ್ಷರಾದ ರೇಣುಕಮ್ಮ ಗಂಡ ಹನುಮಂತು ನಾಯಕ ರವರು ಶಾಲೆಗೆ ವಿಶೇಷ ಅನುದಾನದಲ್ಲಿ ಊಟದ ಕೋಣೆ ಸ್ಮಾರ್ಟ್ ಕ್ಲಾಸ್ ಆಟದ ಮೈದಾನ ಬೋರ್ವೆಲ್ ಹಾಕುವದಾಗಿ ತಿಳಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಲ್ಲೇಶ್ ರೆಡ್ಡಿ ಬಾಯಿದೊಡ್ಡಿ ಹಾಗೂ ಎಲ್ಲಾ ಸದಸ್ಯರು ಅಧಿಕಾರಿಗಳು ಸಹ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು.