ಬಾಯಿತಪ್ಪಿನಿಂದಾಗಿ ಹೇಳಿಕೆ: ಕ್ಷಮೆ ಇರಲಿ ರಾಷ್ಟ್ರಪತಿಗೆ ಅಧೀರ್ ರಂಜನ್ ಪತ್ರ

ನವದೆಹಲಿ, ಜು.29- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದು ಮುಜುಗರಕ್ಕೆ ಒಳಗಾಗಿದ್ದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ‌

ಈ ಕುರಿತು ರಾಷ್ಟ್ರಪತಿ ಅವರಿಗೆ ಪತ್ರ ಬರೆದಿರುವ ಅವರು ಬಾಯಿ ತಪ್ಪಿನಿಂದ ಬಂದ ಹೇಳಿಕೆ. ಈ ಸಂಬಂದ ಕ್ಷಮೆ ಯಾಚಿಸುತ್ತಿದ್ದೇನೆ ತಾವು ಮನ್ನಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರಪತಿ ಅವರನ್ನು ಎರಡು ಬಾರಿ ಉದ್ದೇಶಪೂರ್ವಕವಾಗಿಯೇ ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ ಇದನ್ನು ಯಾವುದೇ ಕಾರಣಕ್ಕೂ ಈ ರೀತಿಯ ಹೇಳಿಕೆ ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ,ಪಿಯುಶ್ ಗೋಯಲ್, ಕಿರಣ್ ರಿಜಿಜ್ ಸೇರಿದಂತೆ ಹಲವು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಂದ್ರ ಸಚಿವರು ಮತ್ತು ‌ಕಾಂಗ್ರೆಸ ಪಕ್ಷದ ಅನೇಕ ನಾಯಕರ ಒತ್ತಡಕ್ಕೆ‌ ಮಣಿದ ಅವರು ಕ್ಷಮಿಸಿ ನಾಲಗೆ ಹೊರಳಿ ಈ ರೀತಿ ಆಗಿದೆ ಎಂದು ವಿನಂತಿಸಿಕೊಂಡಿದ್ದಾರೆ.