ಬಾಯಾರಿಕೆ, ಆಯಾಸ, ದಣಿವಿಗೆ ಮನೆಮದ್ದು

೧. ನಿಂಬೆಹಣ್ಣಿನ ಷರಬತ್ತನ್ನು ಮಾಡಿ ಅದಕ್ಕೆ ಸ್ವಲ್ಪ ಏಲಕ್ಕಿಪುಡಿ ಬೆರೆಸಿ ಕುಡಿದರೆ ಬಾಯಾರಿಕೆ, ಆಯಾಸ ಕಡಿಮೆ ಆಗುತ್ತದೆ.
೨. ಎಳನೀರಿಗೆ ನಿಂಬೆರಸವನ್ನು ಸೇರಿಸಿ ಕುಡಿಯಿರಿ.
೩. ಲಾವಂಚದ ಬೇರನ್ನು ತಂದು ನೀರಿನಲ್ಲಿ ನೆನೆಹಾಕಿ ಇಟ್ಟುಕೊಳ್ಳಿ. ಅದನ್ನು ಶೋಧಿಸಿಕೊಂಡು ನೀರು ಕುಡಿಯುವಾಗಲೆಲ್ಲಾ ಕುಡಿಯುತ್ತಾ ಬಂದರೆ ಬಾಯಾರಿಕೆ, ಆಯಾಸ ಪರಿಹಾರವಾಗಿ ಲವಲವಿಕೆ ಉಂಟಾಗುತ್ತದೆ.
೪. ಪನ್ನೀರು ಗುಲಾಬಿಯನ್ನು ರುಬ್ಬಿ ಶೋಧಿಸಿಕೊಂಡು ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ಬಾಯಾರಿಕೆ, ಬಳಲಿಕೆ ಕಡಿಮೆಯಾಗುತ್ತದೆ.
೫. ಸೌತೆಕಾಯಿಯ ರಸವನ್ನು ಸೇವನೆ ಮಾಡುವುದರಿಂದ ಬಾಯಾರಿಕೆ, ಆಯಾಸ ಕಡಿಮೆಯಾಗುತ್ತದೆ.
೬. ಕಲ್ಲಂಗಡಿ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ಬಾಯಾರಿಕೆ, ಆಯಾಸ ಕಡಿಮೆಯಾಗುತ್ತದೆ.
೭. ನಿಂಬೆಹುಲ್ಲನ್ನು ತಂದು ನೀರಿನಲ್ಲಿ ಹಾಕಿ ಕುದಿಸಿ ಟೀ ರೀತಿಯಲ್ಲಿ ಮಾಡಿ ಕುಡಿಯುವುದರಿಂದ ಬಾಯಾರಿಕೆ, ಆಯಾಸ ಕಡಿಮೆಯಾಗುತ್ತದೆ.
೮. ಪುದಿನಾ ಸೊಪ್ಪು ಹಾಗೂ ಕಲ್ಲುಸಕ್ಕರೆ ಹಾಕಿ ಷರಬತ್ತು ಮಾಡಿ ಕುಡಿಯುವುದರಿಂದ ಆಯಾಸ ಉಪಶಮನವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧