ಬಾಬೂಜಿ ಉತ್ತಮ ಸಂಸದಪಟುವಾಗಿದ್ದರು: ಮೇಟಿ

ಬಾಗಲಕೋಟೆ,ಏ.6: ಬಾಬುಜಗಜೀನರಾಂ ಅವರು ಒಬ್ಬ ಉತ್ತಮ ಸಂಸದ ಪಟುವಾಗಿದ್ದರು ಎಂದು ಮಾಜಿ ಸಚಿವ ಹೆಚ್.ವಾಯ್.ಮೇಟಿ ಅವರು ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ದಿ. ಡಾ||ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಗಜೀವರಾನರಾಂ ಅವರು ಅತ್ಯುನ್ನತ ಹುದ್ದೆಯಾದ ಉಪ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ದೇಶದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಿ ಹಸಿರು ಕ್ರಾಂತಿ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಎಸ್.ಸಿ.ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ ಬಾಬೂಜಿ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೀನ ದಲಿತರ, ಬಡವರ, ಹಿಂದುಳಿದವರ, ಶ್ರಮಿಕರ, ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ವಹಿಸಿ ಸಂಸತ್ತಿನಲ್ಲಿ ಅವರ ಪರವಾಗಿ ಧ್ವನಿ ಎತ್ತಿ ನ್ಯಾಯ ಕೊಡಿಸುತ್ತಿದ್ದರು ಎಂದರಲ್ಲದೇ ಬಾಬೂಜಿ ಅವರು ಮಾಡಿದ ಸಾಧನೆಗಳು ನಮ್ಮ ಕುಣ್ಮುಂದೆ ಇವೆ. ಅವರ ತತ್ವದಾರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಅನೀಲಕುಮಾರ ಹೆಚ್.ದಡ್ಡಿ, ಬ್ಲಾಕ್ ಅಧ್ಯಕ್ಷರುಗಳಾದ ಎಸ್.ಎನ್.ರಾಂಪೂರ, ಹಾಜಿಸಾಬ ದಂಡಿನ, ಎಸ್.ಸಿ.ವಿಭಾಗದ ಕಲಾದಗಿ ಬ್ಲಾಕ್ ಅಧ್ಯಕ್ಷ ಫಕೀರಪ್ಪ ಮಾದರ (ಚಿಕ್ಕಶೆಲ್ಲಿಕೇರಿ) ಪ್ರಧಾನ ಕಾರ್ಯದರ್ಶಿ ಶ್ರವಣ ಖಾತೇದಾರ, ಯಶವಂತ ಕಾಳಮ್ಮನವರ, ಅಡಿವೆಪ್ಪ ಚಂದಾವರಿ, ಜಿಲ್ಲಾಉಪಾಧ್ಯಕ್ಷ ರಾಜು ರಾಠೋಡ, ಮುಖಂಡರುಗಳಾದ ಮಲ್ಲಿಕಾರ್ಜುನ ಮೇಟಿ, ಮಂಜುನಾಥ ಪುರತಗೇರಿ, ಅಭಿಷೇಕ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನ್ಯಾಮಗೌಡರ, ಅಣ್ಣಪೂರ್ಣ ಗೂಗ್ಯಾಳ, ಮಂಜುಳಾ ಭೂಸಾರೆ, ಜಯಶ್ರೀ ಗುಳಬಾಳ, ರೇಣುಕಾ ಕಟ್ಟಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಬಾಬೂಜಿ ಗುಣಗಾಣ ಮಾಡಿದರು.