`ಬಾಬೂಜಿ’ ಆದರ್ಶ ಅವಿಸ್ಮರಣೀಯ: ಬಳ್ಳಾರಿ

ಬ್ಯಾಡಗಿ, ಏ6: ದೇಶದಲ್ಲಿನ ಅಸ್ಪ್ರಶ್ಯತಾ ನಿವಾರಣೆಯ ಹೋರಾಟದಲ್ಲಿ ಶ್ರಮಿಸಿದ ಭಾರತದ ಉಪಪ್ರಧಾನಿಯಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ ಅವರು ಮಹಾನ್ ದಲಿತ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಸೋಮವಾರ ಸ್ಥಳೀಯ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಭಾರತದ ಮಾಜಿ ಉಪಪ್ರಧಾನಿ ದಿ. ಬಾಬು ಜಗಜೀವನರಾಮ ಅವರ 114ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ಬಾಬೂಜಿ” ಎಂದು ಖ್ಯಾತರಾದ ಜಗಜೀವನರಾಮ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ಅಸ್ಪರ್ಷತೆಯ ನಿವಾರಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜವಾಹರಲಾಲ್ ನೆಹರೂ ಅವರ ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಇವರು ಅನಂತರ ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪಪ್ರಧಾನಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆದರ್ಶ ಮತ್ತು ಸಿದ್ಧಾಂತಗಳು ಅವಿಸ್ಮರಣೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಕಲಾವತಿ ಬಡಿಗೇರ, ತಹಶೀಲ್ದಾರ ರವಿಕುಮಾರ ಕೊರವರ, ಟಿಇಓ ಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಟಿ.ಲಮಾಣಿ, ಉಪ ತಹಶೀಲ್ದಾರ ರವಿ ಭೋಗಾರ, ಪುರಸಭಾ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಎಪಿಎಂಸಿ ಸದಸ್ಯ ವಿಜಯ ಮಾಳಗಿ, ಪುರಸಭಾ ಸದಸ್ಯ ಶಂಕರ ಕುಸಗೂರ ಸುರೇಶ ಯತ್ನಳ್ಳಿ, ಅರ್ಜುನಪ್ಪ ಲಮಾಣಿ, ಸೋಮಣ್ಣ ಮಾಳಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜಗಳ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.