ಬಾಬು ಜನಗಜೀವನ್‍ರಾಂ ಜಯಂತಿ ಆಚರಣೆ

ಲಕ್ಷ್ಮೇಶ್ವರ, ಏ6 : ಇಲ್ಲಿನ ಪುರಸಭೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನ ಮಂತ್ರಿ ಡಾ.ಬಾಬುಜಗಜೀವನ ರಾಮ ಅವರ 116ನೇ ಜಯಂತಿ ಆಚರಿಸಲಾಯಿತು. ಪುರಸಭೆ ಸಿಬ್ಬಂದಿ ಬಾಬುಜಗಜೀವನ್‍ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶಿವಣ್ಣ ಮ್ಯಾಗೇರಿ, ಹನಮಂತಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ, ನೇತ್ರಾವತಿ ಹೊಸಮನಿ, ಹೆಬ್ಬಾಳ, ಪರಶುರಾಮ ಮುಳಗುಂದ, ರತ್ನಮ್ಮ ಶೆಳಕೆ, ರಜಿಯಾ ನದಾಪ್, ಸಿದ್ದಣ್ಣ ಬಾಲೆಹೊಸೂರು ಇದ್ದರು.
ಅದೇ ರೀತಿ ತಹಶೀಲ್ದಾರರ ಕಚೇರಿಯಲ್ಲೂ ಬಾಬುಜಗಜೀವನ ರಾಮ ಅವರ ಜಯಂತಿ ಆಚರಿಸಲಾಯಿತು. ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ವಸತಿ ನಿಲಯದ ಮೇಲ್ವಿಚಾರಕ ಅರಳಹಳ್ಳಿ, ಪ್ರವೀಣ ಮತ್ತು ಸಿಬ್ಬಂದಿ ಇದ್ದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನ್‍ರಾಮ್‍ರ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಿ.ಎಂ. ಕುಂಬಾರ ಮಾತನಾಡಿದರು. ಶಿಕ್ಷಕರಾದ ಎಚ್.ಡಿ. ನಿಂಗರೆಡ್ಡಿ, ಸ್ವಪ್ನ ಕಾಳೆ, ಐಶ್ವರ್ಯ ಮೆಡ್ಲೇರಿ, ಆರ್.ಎಂ. ಶಿರಹಟ್ಟಿ ಇದ್ದರು.