ಬಾಬು ಜಗಜೀವನ ರಾಮ್ ಜನ್ಮದಿನ ಆಚರಣೆ

ರಾಯಚೂರು,ಏ.೦೫- ನಗರದ ಪ್ರತಿಷ್ಠಿತ – ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಈ ದಿನದಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪವನ್‌ಕುಮಾರ್ ಸುಖಣಿ ಸರ್ ಸಿ.ಬಿ.ಎಸ್.ಇ. ಶಾಲೆ ಡಿ.ಜಿ. ನಳಿನಿ ಪ್ರಾಂಶುಪಾಲರು, ಆಡಳಿತ ಅಧಿಕಾರಿಗಳಾದ ಸುಭಾಷಿನಿ ವಿನಿಲಾಕ್ಷಿ ಕನ್ನಡ ಮಾಧ್ಯಮ ಮುಖ್ಯ ಗುರುಗಳು, ಪ್ರಹ್ಲಾದ್ ದಿಗ್ಗವಿ, ಬಾಬು ಜಗಜೀವನ ರಾಮ್ ಜನ್ಮದಿನ ಆಚರಣೆಗೆ ಪವನ್ ಕುಮಾರ್ ಸುಖಣಿ ಕಾರ್ಯಕ್ರಮದ ಚಾಲನೆ ನೀಡಿ ಎರಡು ನುಡಿಗಳನ್ನು ಮಾತಾಡಿದರು. (೫ ಏಪ್ರಿಲ್ ೧೯೦೮ ಬಾಬೂಜಿ) ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು ಹಾಗೂ ಎಲ್ಲಾ ಶಿಕ್ಷಕರುಂದದವರು ಹಾಗೂ ದೈಹಿಕ ಶಿಕ್ಷಕರಾದ ಬ್ರಹ್ಮಾನಂದ ರೆಡ್ಡಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಿದರು.