ಬಾಬು ಜಗಜೀವನ ರಾಮ್, ಅಂಬೇಡ್ಕರ್‌ರವರ ಜಯಂತಿ ಸರಳ ಆಚರಣೆ

ಸಿರವಾರ.ಏ.೦೫- ಮಾಜಿ ಉಪಪ್ರಧಾನ ಮಂತ್ರಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ತಹಶಿಲ್ದಾರರ ಮಲ್ಲಿಕಾರ್ಜುನ ವಡನಕೇರಿ ಹೇಳಿದರು.
ಪಟ್ಟಣದ ತಹಶಿಲ್ದಾರರ ಕಛೇರಿಯಲ್ಲಿ ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಏಪ್ರಿಲ್ ೦೫ ರಂದು ಮಾಜಿ ಉಪಪ್ರಧಾನ ಮಂತ್ರಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ಅವರ ಜಯಂತಿ ಇದೆ. ಅದೇ ರೀತಿ ಏಪ್ರೀಲ್ ೧೪ ಡಾ.ಬಿ.ಆರ್. ಅಂಬೇಡ್ಕರ್ ಅವರು ಜಯಂತಿ ಈ ಎರಡು ಜಯಂತಿಯಂದು ತಹಸೀಲ್ದಾರ ಕಛೇರಿ, ಪ.ಪಂ, ಎಲ್ಲಾ ಸರ್ಕಾರಿ ಕಛೇರಿ ಶಾಲೆ, ಕಾಲೇಜುಗಳಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಗುವುದು. ನಾಮಪಲಕಗಳಿಗೆ ಸಿಂಗರಿಸಿ, ಲೈಟಿಂಗ್ ವ್ಯವಸ್ಥೆ, ನೀರು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು. ಭಾವಚಿತ್ರ ಮೆರವಣಿಗೆ, ವೇದಿಕೆ ಕಾರ್ಯಕ್ರಮಕ್ಕೆ ನೀತಿ ಸಂಹಿತೆ ಇರುವುದರಿಂದ ಪರವಾನಿಗೆ ಕಡ್ಡಾಯವಾಗಿದೆ. ಮನವಿ ಪತ್ರ ನೀಡಿದರೆ ಅದನು ಸರಳವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಟರಾಜ, ಪಿಎಸ್ ಐ ಮಾರುತಿ ಎಸ್.ವಿ, ಸಿಡಿಪಿಒ ನಾಗರತ್ನ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮೀ, ತಾ.ಪಂ ಎಡಿ ಬಸವರಾಜ, ಆರೋಗ್ಯ ಇಲಾಖೆ ವೈದ್ಯಾದಿಕಾರಿ ಡಾ.ಸುನೀಲ್ ಸರೋದೆ, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ಪ.ಪಂ ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್, ಮು.ಗು ಕೇಶಪ್ಪ ಕಮ್ಮಾರ, ದಲಿತ ಸಂಘಟನೆಯ ರಾಜಪ್ಪ ಹೊನ್ನಟಗಿ, ಅಬ್ರಾಹಂ ಹೊನ್ನಟಗಿ, ಬಸವರಾಜ ಭಂಡಾರಿ, ಎಂ.ಮನೋಹರ, ಸುರೇಶ, ಚನ್ನಪ್ಪ ಬೂದಿನಾಳ, ಮಲ್ಲು ಕಾಂಬ್ಳೆ, ಶಾಂತಪ್ಪ ಪಿತಗಲ್, ಬಾಲಪ್ಪ ಹಳ್ಳಿಹೊಸೂರು, ಶಂಕರ ಮರಾಟ, ತಿಮ್ಮಣ್ಣ ಮರಾಟ, ರಮೇಶ, ಬೀಮಣ್ಣ, ಪ್ರಕಾಶ ಇನ್ನಿತರರು ಇದ್ದರು.