ಬಾಬು ಜಗಜೀವನ ರಾಮ್‍ರವರ 117ನೇ ಜಯಂತಿ


ಚನ್ನಮ್ಮನ ಕಿತ್ತೂರು,ಏ. 7, ಡಾ. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ದೇಶದ ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆಂದು ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ ಹೇಳಿದರು.
ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್‍ರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಭಾರತೀಯ ಕೃಷಿ ಆಧುನೀಕರಣಗೊಳ್ಳಲು ಹಲವಾರು ಯೋಜನೆಗಳನ್ನು ರೂಪಿಸಿ ಮತ್ತು ಭಾರತದಲ್ಲಿ ಹಸಿರು ಕ್ರಾಂತಿ ನಡೆಸಿ ಆಹಾರ ಉತ್ಪಾದನೆ ವೃದ್ಧಿಗೊಳ್ಳಲು ಶ್ರಮವಹಿಸಿದ ಮಹಾನ್ ನಾಯಕರು ಎಂದರು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ. ಕೆ.ಆರ್.ಮೆಳವಂಕಿ, ಗ್ರಂಥಪಾಲಕ ಸತೀಶ ಶಹಾಪೂರಮಠ, ಕಚೇರಿ ಅಧೀಕ್ಷಕ ಎಸ್. ಐ. ಮಡಿವಾಳರ, ಎನ್,ಎನ್,ಹೊಸಮನಿ, ರೇಖಾ ಗಾಣಿಗೇರ, ಕ್ಲರ್ಕ ವರುಣ ಕುಬಸದಗೌಡರ, ಆನಂದ ಪೂಜೆರ, ನಾಗಪ್ಪ ಉಗರಕೋಡ, ಡಾ. ಬಿ. ಜಿ ನಂದನ, ಹೊನ್ನರಾಜು, ಪ್ರೊ. ಪಿ. ಬಿ. ಹೊನ್ನಪ್ಪನವರ. ಇತರರಿದ್ದರು.