ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಸಿರವಾರ.ಏಂ೪- ಸಮೀಪದ ಹೆಗ್ಗಡದಿನ್ನಿ ಗ್ರಾಮದ ಉನ್ನತಿಗರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಬಾಬು ಜಗಜೀವನ್ ರಾವ್ ರವರ ೧೧೬ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಶೋಷಿತ ಸಮಾಜದಿಂದ ಬೆಳೆದು ಬಂದು ಈ ದೇಶದ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ಮತ್ತು ದೇಶ ಆಹಾರದ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ದೇಶದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಮಹಾನ್ ಚೇತನ ಬಾಬು ಜಗಜೀವನ್ ರಾವ್ ಆಗಿದ್ದಾರೆ ಇವರು ನಡೆದು ಬಂದ ದಾರಿ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ಶಿಕ್ಷಕರಾದ ಚನ್ನಬಸವ ಮಕ್ಕಳನ್ನು ಉದ್ದೇಶಿಸಿ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮು. ಗು. ಸಿದ್ದನಗೌಡ, ರತ್ನಬಾಯಿ, ಗಿರಿಜಾ ಮೇಡಂ, ವಿನೋದ್, ಶ್ರೀಶೈಲಪ್ಪ, ರವಿ ಮತ್ತು ಮಕ್ಕಳು ಉಪಸ್ಥಿತರಿದರು.