ಬಾಬು ಜಗಜೀವನ್ ರಾಮ್ ಆದಶ೯ ಮೌಲ್ಯ ರೂಡಿಸಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಕುಕನೂರು, ಏ.10:  ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಅವರ ತತ್ವ ಆದಶ೯ಗಳನ್ನು ಪಾಲಿಸುವುದು ಇಂದಿನ ಅಗತ್ಯವಿದೆ ಎಂದು ಹೈ ಕೋಟ್೯ ವಕೀಲ ಮಲಿಯಪ್ಪ ಉಜ್ಜಮ್ಮ ನವರ ಸಲಹೆ ನೀಡಿದರು. ಅವರು ಈಚೆಗೆ ತಾಲೂಕಿನ ರಾಜೂರ ಗ್ರಾಮದ ಶ್ರೀ ಸದ್ಗುರು ಹನುಮೇಶ್ವರ ಸಿಂಹಾಸನ ಪ್ರಭುಲಿಂಗ ಮಠದ ಆವರಣದಲ್ಲಿ ಸಮಾನ ಮನಸ್ಕರ ಗೆಳೆಯರು ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಜಗಜೀವನರಾಂ ರವರ ಜಯಂತಿ ಸರಳ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಒಂದು ಕಾಲದಲ್ಲಿ ಬಡತನ ಇರುವುದನ್ನು ಗಮನಿಸಿ ದೇಶದ ರೈತರಿಗೆ ಉಚಿತ ಬೀಜ ಗೊಬ್ಬರ ವಿತರಿಸಿ ಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸಿದ ಮಹಾ ಪುರುಷರು,ಅಲ್ಲದೆ ಕಾಮಿ೯ಕ ಕಲ್ಯಾಣ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಬಡವರಿಗೆ ನೇರವಾದ ಅಗ್ರಗಣ್ಯ ರಾಜಕೀಯ ಮುತ್ಸದ್ದಿ ಎಂದು ಬಣ್ಣಿಸಿದರು.  ಪತ್ರಕತ೯ ರುದ್ರಪ್ಪ ಭಂಡಾರಿ ಬಾಬೂಜಿ ಅವರ ಜೀವನ ಸಾಧನೆಗಳ ಕುರಿತು ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಮುಖಂಡರಾದ ವಕೀಲ ಬಸವರಾಜ್ ಜಂಗ್ಲಿ, ದಸ್ತಗೀರ ಸಾಬ್ ರಾಜೂರೂ,ಬಸವರಾಜ್ ತಾಳಕೆರಿ,ಮಾರುತಿ ಭಂಡಾರಿ,ಗಾಳೆಪ್ಪ ಗಾವರಾಲ, ದೇವಪ್ಪ ಯಡಿಯ ಪೂರ್,ರಮೇಶ್ ಗಜಾಕೋಷ್, ಅಡಿವೆಪ್ಪ ಬೊರನ್ನವರ್ ಸೇರಿದಂತೆ ಅನೇಕ ಗ್ರಾಮಗಳ ಯುವ ಮುಖಂಡರು ಭಾಗವಹಿಸಿದ್ದರು.

One attachment • Scanned by Gmail