ಬಾಬು ಜಗಜೀವನರಾಮ ಜಯಂತಿ ಸರಳವಾಗಿ ಆಚರಿಸಿ

ವಾಡಿ:ಎ.4: ಕೋವಿಡ್ ಕಾರಣದಿಂದಾಗಿ ಈ ಬಾರಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಿ ಸಹಕರಿಸಬೇಕು ಎಂದು ವಾಡಿ ಪಿಎಸ್ಐ ವಿಜಯಕುಮಾರ್ ಬಾವಗಿ ಮನವಿ ಮಾಡಿಕೊಂಡರು.

ಪಟ್ಟಣದ ವಾಡಿ ಪೊಲೀಸ್ ಠಾಣೆಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ 114ನೇ ಜಯಂತಿತ್ಯೋತ್ಸ ನಿಮಿತ ಕರೆಯಲಾಗಿದ್ದ ಶಾಂತಿ ಸಭೆ ಉದ್ದೇಶಿ ಅವರು ಮಾತನಾಡಿದರು. ರಾಜ್ಯದಲ್ಲಿಯ ಕೋವಿಡ್ ಎರಡನೇಯ ಅಲೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹೂಸ ಮಾರ್ಗ ಸೂಚಿಯನ್ನು ಹೊರಡಿಸಿದ್ದೆ. ಈ ನಿಟ್ಟಿನಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ 130ನೇ ಜಯಂತಿ ಹಾಗೂ ಭಾರತದ ‌ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 114ನೇ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಕೋವಿಡ್ ಹರಡದಂತೆ ನೋಡಿಕೊಳ್ಳಬೇಕಾಗಿ ಸೂಚಿಸಿದರು.

ಬಳಿಕ‌ ಮಾತನಾಡಿದ ಮಾದಿಗ ಸಮಾಜದ ಮುಖಂಡರಾದ ರಾಜು ಮುಕ್ಕಣ್ಣಾ ಅವರು ನಾವು ಸರ್ಕಾರವನ್ನು ಗೌರವದಿಂದ ಕಾಣುತ್ತೆವೆ. ಹೀಗಾಗಿ ಇಲಾಖೆಗೆ ಗೈಡ್ ನೈನ್ ಗೆ ನಾವು ಬದ್ದರಾಗಿದ್ದೆವೆ ಏ.05ರಂದು ಪಟ್ಟಣದ ಡಾ.ಬಾಬು ಜನಜೀವನ ರಾಮ್ ಅವರ ವೃತ್ತದಲ್ಲಿ ಅತ್ಯಂತ ಸರಳವಾಗಿ ಆಚರಿಸುವುದಾಗಿ ತಿಳಿಸಿದರು‌. ಇನ್ನೂ ಒಂದೇ ಸಮುದಾಯಕ್ಕೆ ಕರೆಸಿ ಶಾಂತಿಸಭೆ ಮಾಡುವುದು ಸರಿಯಲ್ಲ ಎಲ್ಲರೂ ಸೇರಿಯೇ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸುತ್ತೆವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಶಾಂತಿ ಸಭೆಯಲ್ಲಿ ಮಾದಿಗ ಸಮಾಜದ ಅಧ್ಯಕ್ಷರಾದ ಸಿದ್ರಾಮ ತೆಗನೂರ, ಯುವ ಘಟಕದ ಅಧ್ಯಕ್ಷರಾದ ರಿಚರ್ಡ್ ಮರೆಡ್ಡಿ, ಮುಖಂಡರಾದ ಸುಮಿತ್ರಪ್ಪ ಹೊಸೂರ, ಚಂದಪ್ಪ ಕಟ್ಟಿಮನಿ, ರಾಜು ಮರೆಡ್ಡಿ, ಅಂಬ್ರೇಶ ಮಾಳಗೆ, ಮಲ್ಲಿಕಾರ್ಜುನ ಸೈದಾಪೂರ, ಶರಣು ಮರತೂರ, ಶರಣು ಬಂದಳ್ಳಿ, ಬಸವರಾಜ ತುಮಕೂರಕರ್, ಪರಮೇಶ್ವರ ಕೇಲ್ಲೂರ, ರವಿಕುಮಾರ ಕೊಳಕೂರ, ಮಲ್ಲಿಕಾರ್ಜುನ ಮುದ್ನಾಳ, ಸಿಬ್ಬಂದಿಗಳಾದ ದೊಡ್ಡಪ್ಪ ಪಿ. ದತ್ತು ಜಾನೆ ಅಶೋಕ ಮೇತ್ರಿ, ಮಲ್ಲಿಕಾರ್ಜುನ ಕೊಳ್ಳೂರೆ, ಮಾಪಣ್ಣ ನರಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.