ಬಾಬು ಜಗಜೀವನರಾಮ್ ಪುತ್ಥಳಿಗೆ ದದ್ದಲ್ ಮಾಲಾರ್ಪಣೆ

ರಾಯಚೂರು,ಏ.೦೫- ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿ ಡಾ.ಬಾಬು ಜಗಜೀವನರಾಮ್ ೧೧೭ ನೇ ಜಯಂತಿ ಅಂಗವಾಗಿ
ಡಾ.ಬಾಬು ಜಗಜೀವನ ರಾಮ್ ಅವರ ಮರಿ ಮೊಮ್ಮಗ ಅನೀಸುಲ್ ಮತ್ತು ಮಾಜಿ ಸಚಿವರಾದ ಹೆಚ್ ಅಂಜಿನಯ್ಯ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಇಂದು ಬೆಂಗಳೂರಿನ ವಿಧಾನಸೌಧ ಡಾ.ಬಾಬು ಜಗಜೀವನ ರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ ವಕೀಲ್, ನರಸಿಂಹಲು ಖಾನಾಪುರ, ಜಿಂದಪ್ಪ ಹೊಸಪೇಟೆ, ಆಬ್ರಾಮ್ ಕಮಲಾಪುರ್, ಈರಪ್ಪ ಗಣಮೂರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.