ಬಾಬು ಜಗಜೀವನರಾಮ್‍ರ ಕ್ರಾಂತಿಕಾರಿ ಹೆಜ್ಜೆಗಳು ಇಂದಿನ ಯುವಕರಿಗೆ ಮಾದರಿ: ಪ್ರೊ.ದೇಶಪಾಂಡೆ

ವಿಜಯಪುರ, ಎ.6-ಬಾಬು ಜಗಜೀವನರಾಮ್‍ಅವರು ಪ್ರತಿ ಹಂತದಲ್ಲಿಯೂ, ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸ ಹೊಸ ವಿಚಾರಧಾರೆಗಳನ್ನು ಕಂಡುಕೊಂಡವರು. ಅವರ ಕ್ರಾಂತಿಕಾರಿ ಹೆಜ್ಜೆಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಪ್ರೊ.ಶರದ್‍ದೇಶಪಾಂಡೆ ಹೇಳಿದರು.
ಅವರುಇಲ್ಲಿಯಕರ್ನಾಟಕರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಡಾ.ಬಿ.ಆರ್.ಅಂಬೇಡ್ಕರ್‍ಅಧ್ಯಯನಕೇಂದ್ರ ಹಾಗೂ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಘಟಕದ ಸಹಯೋಗದಲ್ಲಿ ಡಾ.ಬಾಬು ಜಗಜೀವನ್‍ರಾಮ್ ಅವರ 113ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಾಬು ಜಗಜೀವನರಾಮ್‍ಅವರು ಕೃಷಿ ಮಂತ್ರಿಯಾಗಿದ್ದಾಗತೆಗೆದುಕೊಂಡ ನಿರ್ಣಯಗಳು, ಜಾರಿಗೆತಂದ ಯೋಜನೆಗಳೆಲ್ಲವು ರೈತರಿಗೆಅನುಕೂಲಕರವಾಗಿದ್ದವು.ಕೃಷಿಯಜೊತೆಗೆ ನೀರಾವರಿಕ್ಷೇತ್ರದಲ್ಲಿಯೂಅವರು ಸೇವೆ ಸಲ್ಲಿಸಿದ್ದಾರೆ.ರೈತರಿಗೆ ಬೆನ್ನೆಲುಬಾಗಿ ನಿಂತಅವರುರಾಷ್ಟ್ರದಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆಅಪಾರ’ ಎಂದರು.
‘ನಾವೆಲ್ಲರೂ ಜೀವಿಸಬೇಕಾದರೆ ಕೃಷಿಯ ಮೇಲೆಯೇ ಅವಲಂಬಿತರಾಗಬೇಕು. ಆದ್ದರಿಂದ ನಾವು ರೈತರಿಗೆ ಮತ್ತು ರೈತಬೆಳೆದ ಬೆಳೆಗೆ ಬೆಲೆ ಕೊಡಬೇಕು ಅಂದಾಗ ಮಾತ್ರ ಬಾಬುಜಿ ಅವರ ಸುಸ್ಥಿರ ಕೃಷಿ ಅಭಿವೃದ್ಧಿಯ ವಿಚಾರ ಧಾರೆಗಳಿಗೆ ನಿಜವಾದ ಮಹತ್ವ ದೊರಕಿದಂತಾಗುತ್ತದೆ’ ಎಂದು ಅವರು ಹೇಳಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಗೊಟಗೊಡಿಯ ಕರ್ನಾಟಕಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಿಗಿ ಮಾತನಾಡಿ, ‘ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹೀಗೆ ಪ್ರತಿ ಹಂತದಲ್ಲಿಯೂ ಶೋಷಣೆಗೆ ಒಳಗಾದ ದಮನಿತ ವರ್ಗದ ಪ್ರತಿನಿಧಿಯಾಗಿಅವರ ಸಮಾನತೆಗಾಗಿ ಹೋರಾಡಿದ ಬಾಬುಜಿ, ಇಂದಿಗೂ ಎಲ್ಲರಿಗೂ ಮಾದರಿ.ಆರ್ಥಿಕ ಸಮಾನತೆಗೆಒತ್ತು ನೀಡಿದ ಅವರು, ರಾಜಕೀಯ ಹಕ್ಕುಗಳ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿದ್ದರು ಎಂದರು.
‘ಬಾಬುಜಿ ಅವರು ದುಡಿಯುವ ವರ್ಗದ ಜನರ ಭದ್ರತೆ, ಸಾಮಾಜಿಕ ವಿಮೆ, ಕನಿಷ್ಠ ಕೂಲಿ ಕಾಯ್ದೆ, ಭವಿಷ್ಯ ನಿಧಿ, ವಿಮಾನಯಾನದ ರಾಷ್ಟ್ರೀಕರಣ, ಕೃಷಿ ಸ್ವಾವಲಂಬನೆ, ನೀರಾವರಿಗೆ ಪ್ರಾಶಸ್ತ್ಯ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆತಂದು ನಮ್ಮ ದೇಶದ ಆರ್ಥಿಕ ಸುಧಾರಣೆಗೆ, ಅಭಿವೃದ್ಧಿಗೆಯಾವ ಸ್ವಾರ್ಥವಿಲ್ಲದೇ ಕೊಡುಗೆ ನೀಡಿದ್ದಾರೆ. ಅವರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅಂದಾಗ ಮಾತ್ರಅವರ ಸಮ ಸಮಾಜದ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ‘ತುಂಬಾ ಜಾಗರೂಕವಾಗಿ, ಜಾಣತನದ ಹೆಜ್ಜೆ ಇಟ್ಟ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ ಬಾಬುಜಿ ಅವರು, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಇವುಗಳ ಬಗ್ಗೆ ದನಿ ಎತ್ತಿದ್ದರು. ಅವರÀ ಆದರ್ಶಗಳ ಬಗ್ಗೆ ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮಹಿಳಾ ವಿವಿಯ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಬುದ್ಧ ವಂದನೆ ಮಾಡಿದರು. ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಘಟಕದ ನಿರ್ದೇಶಕಿ ಡಾ.ಅನೀತಾ ನಾಟೆಕರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಸುರೇಶ್.ಕೆ.ಪಿ.ಅತಿಥಿಗಳನ್ನು ಪರಿಚಯಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವೆಂಕೋಬ ನಾರಾಯಣಪ್ಪ ವಂದಿಸಿದರು. ಡಾ.ವಿಷ್ಣು.ಎಂ.ಶಿಂದೆ ಕಾರ್ಯಕ್ರಮವನ್ನು ನಿರೂಪಿಸಿದರು.