ಬಾಬು ಜಗಜೀವನರಾಂ ಅವರ ೧೧೬ನೇ ಜಯಂತಿ: ಸರಳ ಆಚರಣೆ

ಮುದಗಲ್ಲ,ಏ.೦೫-
ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಜಯಂತಿ ಯನ್ನು ಮುದಗಲ್ಲ ಪುರಸಭೆ ಹಾಗೂ ಮುದಗಲ್ಲ ನಾಡ ಕಾಯ೯ಲಯ ದಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನ ರಾಂ ಅವರ ೧೧೬ನೇ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ಪುರಸಭೆ ಯಲ್ಲಿ ಜಗಜೀವನರಾಂ ಭಾವಚಿತ್ರ ಕ್ಕೆ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಪೂಜೆ ಸಲ್ಲಿಸಿದರು ಹಾಗೂ ನಾಡ ಕಾಯಾ೯ಲಯದಲ್ಲಿ ಉಪ ತಹಶೀಲ್ದಾರ್ ತುಲುಜಾರಾಮ ಸಿಂಗ್ ಅವರು ಭಾವಚಿತ್ರ ಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಯಕ, ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ, ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ,ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕದ ಅಧ್ಯಕ್ಷ ರಾದ ಬಸವರಾಜ ಬಂಕದಮನಿ, ನಾಗರಾಜ್ ತಳವಾರ ,ಮೈಬುಸಾಬ ಬಾರಿಗಿಡ, ಸತೀಶ್ ಭೋವಿ, ದುರಗಪ್ಪ , ಶೀಲಪ್ಪ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.