ಬಾಬುರಾವ್ ಪಾಟೀಲ ಮನೆ ಮೇಲೆ ಇಡಿ ದಾಳಿ

ಚಿಂಚೋಳಿ,ಅ 19: ಮಾಜಿ ಸಚಿವ ವೈಜನಾಥ ಪಾಟೀಲ ಅವರ ಸಹೋದರ ಬಾಬುರಾವ್ ಪಾಟೀಲ ಅವರ ಮನೆ ಮೇಲೆ ಹೈದರಾಬಾದ್ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದರು.
ಇಡಿಯ ನಾಲ್ವರು ಅಧಿಕಾರಿಗಳ ತಂಡದವರು ದಾಳಿ ನಡೆಸಿದ್ದಾರೆ. ಜೊತೆಗೆ ಕೇಂದ್ರೀಯ ಮೀಸಲು ಪಡೆಯ ನಾಲ್ವರು ಯೋಧರು ಸಹ ಇದ್ದಾರೆ. ಚಿಂಚೋಳಿ ಶುಗರ್ಸ್ ಅಂಡ್ ಬಯೋ ಇಂಡಸ್ಟ್ರೀಸ್ ಸಂಬಂಧಿಸಿದ ದಾಖಲೆ ಪರಿಶೀಲನೆಗೆ ದಾಳಿ ನಡೆಸಲಾಗಿದೆ ಎಂದು ಕರ್ನಾಟಕ ಪೆÇಲೀಸ್ ಮೂಲಗಳು ತಿಳಿಸಿವೆ.
ನೆರೆ ರಾಜ್ಯದ ನೋಂದಣಿ ಹೊಂದಿರುವ ಖಾಸಗಿ ಕಾರುಗಳಲ್ಲಿ ಬಂದ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದು, ಯಾರನ್ನೂ ಒಳಗಡೆ ಬಿಡುತ್ತಿಲ್ಲ.
ಸುದ್ದಿ ತಿಳಿದು ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ, ಪಿಎಸ್‍ಐ.ಎ.ಎಸ್ ಪಟೇಲ್ ಮೊದಲಾದವರು ಭೇಟಿ ನೀಡಿದರು