ಬಾಬುರಾವ್ ಡಾಕ್ಟರೇಟ್ ಪದವಿ ಸ್ವೀಕಾರ ಸನ್ಮಾನ

ರಾಯಚೂರು.ಡಿ.೩೦- ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಅವರ ಸಮಾಜ ಸೇವೆ ಗುರುತಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮದರ್ ತೆರೇಸಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಂತರ ಬಾಬುರಾವ್ ಅವರಿಗೆ ಲೋಕಸಭಾ ಸಂಸದ ಅಮರೇಶ ನಾಯಕ ಹಾಗೂ ಶಾಸಕ ಶಿವರಾಜ ಪಾಟೀಲ್ ಅವರು ಶಾಲುವಧಿಸಿ ಸನ್ಮಾನಿಸಿದರು.
ಬಾಬುರಾವ್ ಅವರು ಅನೇಕ ರಂಗಗಳ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಉನ್ನತ ಸ್ಥಾನದಲ್ಲಿ ಬೆಳೆಯಲಿ ಎಂದು ಹಾರೈಸಿದರು. ಬಾಬುರಾವ್ ಅವರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಾಮಾಜಿಕ ಕಾಳಜಿವುಳ್ಳ ವ್ಯಕ್ತಿ ಅವರಿಗೆ ಡಾಕ್ಟರ್ ಪದವಿ ಸ್ವೀಕರಿಸಿರುವುದು ಖುಷಿಯ ಸಂಗಾತಿ ಎಂದು ಹರ್ಷ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಮದರ್ ತೆರೇಸಾ ವಿಶ್ವವಿದ್ಯಾಲಯದಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಹೋಟೆಲ್ ಪರಾಗದಲ್ಲಿ ದಿ.೨೮ ರಂದು ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು. ಯಶಸ್ವಿ ಚಂದ್ರಯಾನದ ರೂವಾರಿಯಾಗಿರುವ ಭಾರತ ಸರ್ಕಾರದ ಡಿಆರ್‌ಡಿಯು ಹಾಗೂ ವಿಜ್ಞಾನಿಗಳಾದ ಡಾಕ್ಟರ್ ಎನ್.ಪ್ರಭಾಕರ್ ಅವರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು.