ಬಾಬುರಾವ್‌ಗೆ ಗೌರವ ಡಾಕ್ಟರೇಟ್ ಪ್ರಧಾನ

ಬೆಂಗಳೂರು.ಡಿ.೨೮-
ನಗರದ ಸಮಾಜ ಸೇವಕರು, ರಾಜಕೀಯ ಧುರೀಣರು, ರೈಲ್ವೆ ಬೋರ್ಡಿನ ಸಲಹಾಗಾರ ಬಾಬುರಾವ್ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮದರ್ ತೆರೇಸಾ ವಿಶ್ವವಿದ್ಯಾಲಯದಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.
ಯಶಸ್ವಿ ಚಂದ್ರಯಾನದ ರೂವಾರಿಯಾಗಿರುವ ಭಾರತ ಸರ್ಕಾರದ ಡಿ ಆರ್ ಡಿ ಯು ಹಾಗೂ ವಿಜ್ಞಾನಿಗಳಾದ ಡಾಕ್ಟರ್ ಎನ್ ಪ್ರಭಾಕರ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಯಭಾರಿಗಳಾದ ಡಾ. ಜಿ ರಾಬರ್ಟ್ ಡೊನಾಲ್ಡ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಸ್ವೀಕರಿಸುತ್ತಿರುವವರಿಗೆ ಶುಭ ಹಾರೈಸಿದರು.
ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶಿವರಾಜ್ ಪಾಟೀಲ್ ಇವರು ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಶ್ರೀ ಬಾಬುರಾವ್ ಅವರ ಸಮಾಜ ಸೇವೆಯು ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದ್ದಾರೆ. ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ
ಎನ್ ಎಸ್ ಬೋಸ್ ರಾಜ್ ಬಾಬುರಾವ್ ಅವರ ಸಾಮಾಜಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಅಭಿನಂದಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯ ಸರಸ್ವತಿ, ಹಲವಾರು ವಿಜ್ಞಾನಿಗಳು ಮತ್ತು ಗಣ್ಯರು ಪಾಲ್ಗೊಂಡಿದ್ದರು.