ಬಾಬುಜೀ ಹಸಿರು ಕ್ರಾಂತಿ ಹರಿಕಾರ

ಮುಳಬಾಗಿಲುಏ೬:ದೇಶದ ಉಪಪ್ರಧಾನಿಯಾಗಿ ಹಾಗೂ ಹಸಿರು ಕ್ರಾಂತಿಹರಿಕಾರರಾದ ಡಾ.ಜಗಜೀವನರಾಮ್ ರವರು ದೇಶದಲ್ಲಿ ಹಸಿವು ಮುಕ್ತಗೊಳಿಸಲು ಶ್ರಮಿಸಿದರು ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಬಾಬು ಜಗಜೀವನ್‌ರಾಂ ರವರ ೧೧೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಜಗಜೀವನ್‌ರಾಂ ರವರು ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದೀನದಲಿತರ ಏಳಿಗೆಗೆ ಶ್ರಮಿಸಿದವರಲ್ಲಿ ಅಗ್ರ ಪಂಕ್ತಿಯಲ್ಲಿದ್ದರು ಇವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಹೇಳಿದರು.
ಕ.ಸಾ.ಪ ಖಜಾಂಚಿ ವಿ.ಜಯಪ್ಪ, ಮಾದಿಗ ದಂಡೋರ ರಾಜ್ಯ ಮುಖಂಡ ನಾಗರಾಜ್, ದಲಿತ ಮುಖಂಡರಾದ ಮೆಕಾನಿಕ್ ಜಿ.ಶ್ರೀನಿವಾಸ್, ಮುನೆಪ್ಪ ವೆಂಕಟರಾಮಪ್ಪ ಮತ್ತಿತರರು ಇದ್ದರು.