ಬಾಬುಜಿ ಅವರ ಪುತ್ಥಳಿಗೆ ಗೌರವ ನಮನ

ಕಲಬುರಗಿ.ಏ.05:ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬೂ ಜಗಜೀವನರಾಮ್ ರವರ 114 ನೇ ಜಯಂತಿ ನಿಮಿತ್ತ ಕಲಬುರಗಿಯಲ್ಲಿ ಬಾಬುಜಿ ಅವರ ಪುತ್ಥಳಿಗೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನಾಮದೇವ ರಾಠೋಡ ಕರಹರಿ, ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಲಕ್ಷ್ಮಿ ನಾರಾಯಣ್ ಚಿಮ್ಮನಚೋಡಕರ್, ರಾಜು ವಾಡೇಕರ್, ಶಾಂತವೀರ ಬಡಿಗೇರ,ಅಮೃತ ಸಾಗರ್ ಹಾಗೂ ಇತರಿದ್ದರು.