ಬಾಬಾ ಸಾಹೇಬರ ಜೀವನ ಜಗತ್ತಿಗೆ ಮಾದರಿ

ಶಹಾಪುರ:ಡಿ.7:ವಾಡಗೇರಾ ತಾಲೂಕಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ, ಕಡಂಗೇರಾ(ಬಿ.) ಶಾಲೆಯಲ್ಲಿ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಗುರುಗಳಾದ ಶ್ರೀ ಅಯೂಬ್ ಜಮಾದಾರ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನ ನಡೆದ ಬಂದ ದಾರಿ ಪ್ರತಿಯೊಬ್ಬರಿಗೂ ಆದರ್ಶ. ದೇಶಕ್ಕೆ ನೀಡಿದ ಸಾಧನೆ ಇಡೀ ಜಗತ್ತಿಗೆ ಮಾದರಿ. ಪ್ರತಿಯೊಬ್ಬ ವಿಧ್ಯಾರ್ಥಿಗಳು ಅಂಬೇಡ್ಕರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಕಿವಿ ವಿದ್ಯಾರ್ಥಿಗಳಿಗೆ ಮಾತು ಹೇಳಿದರು.

ಸಹ ಶಿಕ್ಷಕರಾದ ಖಾಜಾ ಮೈನೋದ್ದಿನ್ ಮಾತನಾಡಿ ವಿಧ್ಯಾರ್ಥಿಗಳಿಗೆ ಬಾಬಾ ಸಾಹೇಬರ ಜೀವನ ಚರಿತ್ರೆ ಬಗ್ಗೆ ಸವಿವರ ನೀಡಿದರು.

ಶಿಕ್ಷಕ ತಮ್ಮಣ್ಣ ನಿರೂಪಿಸಿದರು. ರಾಘವೇಂದ್ರ ಶಿಕ್ಷಕರು ಸ್ವಾಗತಿಸಿದರು, ಮಹಾದೇವಿ ಶಿಕ್ಷಕಿ ವಂದಿಸಿದರು.