ಬಾಬಾ ಜಗಜೀವನರಾಂ ಒಂದು ಸಮುದಾಯಕ್ಕೆ ಸೀಮಿತರಲ್ಲ

ಹೊಸಕೋಟೆ, ಜು.೯- ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‌ರಾಂ ರವರು ಕೇವಲ ದಲಿತ ಸಮುದಾಯಕ್ಕೆ ಸೀಮಿತವಾದವರಲ್ಲವೆಂದು ತಾಲ್ಲೂಕು ದಂಢಾಧಿಕಾರಿಗಳಾದ ವಿಜಯ್‌ಕುಮಾರ್‌ರವರು ತಿಳಿಸಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಬಾಬು ಜಗಜೀವನ್‌ರಾಂ ರವರ ೩೭ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬು ಜಗಜೀವನ್‌ರಾಂ ರವರು ದಲಿತ ಸಮುದಾಯದಲ್ಲಿ ಹುಟ್ಟಿದರೂ ಸಹ ದೇಶದ ಹಸಿವು ನೀಗಿಸಿ & ಹಸಿರನ್ನು ಹೆಚ್ಚಿಸಲು ಶ್ರಮಿಸಿ ಜೀವನ ಪೂರ್ತಿ ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ್ದು ಅವರ ಸ್ಮರಣೆ ಮಾಡುತ್ತಿರುವುದರ ಜೊತೆಗೆ ಅವರ ಆದರ್ಶಗಳನ್ನು ಪಾಲಿಸಿ ಸಮಾಜಕ್ಕೆ ನಮ್ಮದೆ ಆದ ಸೇವೆಯನ್ನು ಸಲ್ಲಿಸಬೇಕಾಗುತ್ತದೆ ಎಂದರು.
ನಂತರ ಮಾದಾರ ಮಹಾ ಸಭದ ಅದ್ಯಕ್ಷ ಹೆಚ್.ಎಂ.ಸುಬ್ಬರಾಜು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ರವರು ದೇಶದ ಎರಡು ಕಣ್ಣುಗಳತ್ತಿದ್ದು ಅಂಬೇಡ್ಕರ್‌ರವರ ಪುತ್ಥಳಿ ತಾಲ್ಲೂಕು ಕಛೇರಿ ಆವರಣದಲ್ಲಿದೆ ಆದರೆ ಬಾಬು ಜಗಜೀವನ್‌ರಾಂರವರ ಪುತ್ಥಳಿ ಇಲ್ಲ ಆದ್ದರಿಂದ ಅತೀ ಶೀಘ್ರದಲ್ಲಿ ನಿರ್ಮಾಣ ಮಾಡಬೇಕಿದೆ ಎಂದು ತಾಲ್ಲೂಕು ಆಡಳಿv, ಹಾಗು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪ್ರತಿಮೆ ನಿರ್ಮಿಸಬೇಕೆಂದರು.
ಈ ಸಂಧರ್ಭದಲ್ಲಿಡಾ ಹೆಚ್ ಎಂ ಸುಬ್ಬರಾಜು , ನರಸಿಂಹಯ್ಯ ನಾಗರಾಜ್ , ದರ್ಶನ್ .ಶಿವಾನಂದ್, ವಾರ್ಡನ್ ಸುಬ್ರಮಣಿ ಪುಟ್ಟಸ್ವಾಮಿ ಲೋಕೇಶ್.ರಾಮೇಗೌಡ ಶಿವಕುಮಾರ್ ಭಾಗವಹಿಸಿದ್ದರು.