ಬಾಬಾಸಾಹೇಬ ಅಂಬೇಡ್ಕರವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ: ಶಾಸಕ ಯತ್ನಾಳ

ವಿಜಯಪುರ, ಎ.15-ಡಾ. ಬಾಬಾಸಾಹೇಬ ಅಂಬೇಡ್ಕರವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ ಸಮಗ್ರ ಭಾರತದ ಶೋಷಿತರ ಪರವಾಗಿ ಧ್ವನಿ ಎತ್ತಿದ ಮಹಾನಾಯಕ ಎಂದು ಬಣ್ಣಿಸಿದರು. ಅಲ್ದಲೆ ದಲಿತ ವರ್ಗದವರು ಬಾಬಾಸಾಹೇಬರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಛಲವಾದಿ ಹಾಗೂ ಬುದ್ಧವಿಹಾರ ನಿರ್ಮಾಣ ಸಮಿತಿಯ ವತಿಯಿಂದ ದಿನಾಂಕ 14-4-2021 ರಂದು ಸಂಜೆ 6-00 ಗಂಟೆಗೆ ವಿಜಯಪುರ ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರವರ 130ನೇ ಜಯಂತಿ ಉತ್ಸವ ದಲ್ಲಿ ಮಾತನಾಡಿದ ಅವರು ಡಾ. ಬಾಬಾಸಾಹೇಬ ಅಂಬೇಡ್ಕರವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ ಸಮಗ್ರ ಭಾರತದ ಶೋಷಿತರ ಪರವಾಗಿ ಧ್ವನಿ ಎತ್ತಿದ ಮಹಾನಾಯಕ ಎಂದು ಬಣ್ಣಿಸಿದರು. ಅಲ್ದಲೆ ದಲಿತ ವರ್ಗದವರು ಬಾಬಾಸಾಹೇಬರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಹಾಗೂ ನ್ಯಾಯವಾದಿ ಸುನೀಲ ಉಕ್ಕಲಿ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರವರು ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ ಹೊಂದಿದ್ರು ಸಮಾಜದ ಎಲ್ಲ ವರ್ಗದ ಬಡವರಿಗೆ ಸಾಮಾಜಿಕ ನ್ಯಾಯದೊರಕಬೇಕು ಅಂದಾಗ ಮಾತ್ರ ಸಮಸಮಾಜ ನಿರ್ಮಾಣವಾಗಲು ಸಾಧ್ಯ ಅಲ್ಲದೇ ವೈಜ್ಞಾನಿಕ ಆಧಾರದ ಮೇಲೆ ರಚಿತವಾಗಿರುವ ಬೌದ್ಧ ಧರ್ಮದ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊÀ್ಳಬೇಕೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾಜು ಆಲಗೂರ ಅವರು ಮಾತನಾಡಿ ಭಾರತದ ಸಂವಿಧಾನ ಜಗತ್ತಿನಲ್ಲಿಯ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಡಾ. ಬಿ.ಆರ್. ಅಂಬೇಡ್ಕರವರು ಮಹಿಳಾ ಸಮಾನತೆಗೆ ಹಾಗೂ ಎಲ್ಲ ವರ್ಗದ ಶೋಷಿತರಿಗೆ ನ್ಯಾಯ ದೊರಕುವಂತೆ ಪ್ರತಿಪಾದಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಛಲವಾದಿ ಸಮಾಜದ ಮುಖಂಡರಾದ ಚಂದ್ರಶೇಖರ ಕೊಡಬಾಗಿ ನಿವೃತ್ತ ಪೋಲಿಸ ಉಪಾಯುಕ್ತ ಸುಭಾಸ ಗುಡಿಮನಿ, ಜಿಲ್ಲಾ ಕಾಂಗ್ರೇಸ್ ಮಹಿಳಾ ಸಮಿತಿ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮಾಜಿ ಶಾಸಕ ಮನೋಹರ ಐನಾಪೂರ, ಸುರೇಶ ಗೊಣಸಗಿ, ಮಹೇಶ ಕ್ಯಾತನ್ ಉಪಸ್ತಿತರಿದ್ದರು.
ಈ ಸಂದರ್ಭದಲ್ಲಿ ಡಾ. ರಾಜು ಜೊಳ್ಳಿ, ಡಾ. ಬಿ.ಎಲ್. ವಿಜಯದಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನಿಯರನ್ನು ಸನ್ಮಾಸಲಾಯಿತು.
ಕಾರ್ಯಕ್ರಮದಲ್ಲಿ ರಾಹುಲ ಕುಬಕಡ್ಡಿ, ಅಡಿವೆಪ್ಪ ಸಾಲಗಲ್, ಕುಮಾರ ಶಹಪುರ, ವಾಯ್.ಎಚ್. ವಿಜಯಕರ, ಮುಂತಾದವರು ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಬುದ್ಧನ ಜೀವನ ಚರಿತ್ರೆಯ ನೃತ್ಯರೂಪಕ ಕಾರ್ಯಕ್ರಮ ಜರುಗಿತು.