
ತಾಳಿಕೋಟೆ:ಸೆ.6: ಪಟ್ಟಣದ ಶ್ರೀ ನಿಮಿಷಾಂಭಾ ಏಜ್ಯೂಕೇಶನ್ ಸೋಸಾಯಿಟಿ ಅಡಿಯಲ್ಲಿ ನಡೆಯಿತ್ತಿರುವ ಬಾಪೂಜಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ|| ಸರ್ವಪಲ್ಲಿ ರಾಧಾಕೃಷ್ಣನರವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಘನಶಾಮ ಚವ್ಹಾಣ ಅವರು ಪುಷ್ಪನಮನ ಸಲ್ಲಿಸಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀಮಾ ಚವ್ಹಾಣ, ಮುಖ್ಯಗುರುಗಳಾದ ಶಿವಾನಂದ ಹಿರೇಮಠ, ಶಿಕ್ಷಕ ವೃಂದದವರು ಹಾಗೂ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.