ಬಾಪೂಜಿ ನಗರದಲ್ಲಿ ಭರತ್ ರೆಡ್ಡಿ ಪರಅಲ್ಲಂ ಪ್ರಶಾಂತ್ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,7- ನಗರದ 7 ವಾರ್ಡ್ ಬಾಪೂಜಿ ನಗರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಅಲ್ಲಂ ಪ್ರಶಾಂತ್ ಅವರು ಹಲವು ಮುಖಂಡರೊಂದಿಗೆ ನಿನ್ನೆ ನಗರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರ ಮತಯಾಚನೆ ಮಾಡಿದರು.
ಪಕ್ಷದ ಮುಖಂಡರಾದ ಶಿವರಾಜ್ ಹೆಗಡೆ, ನಾರಾಯಣರಾವ್ ಚಿಟ್ಟಿ, ಮುಂಡ್ರಿಗಿ ನಾಗರಾಜ್ ಮೊದಲಾದವರೊಂದಿಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಗಳ ಬಗ್ಗೆ ಕರ ಪತ್ರ ಹಂಚಿ ಕಾಂಗ್ರೆಸ್ ಗೆ ಮತ ನೀಡುವಂತೆ ಕೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಂ ಪ್ರಶಾಂತ್ ಅವರು‌. ಈ ಭಾಗದಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಾಗಿದ್ದಾರೆಂದು ಹೇಳುತ್ತಿಲ್ಲ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಎಸ್ಸಿ ಸಮುದಾಯ ಬೆಂಬಲಿಸುತ್ತ ಬಂದಿದೆ. ಅದೇರೀತಿ ಪಕ್ಷವೂ ಸಹ ಎಸ್ಸಿ‌ಸಮುದಾಯಕ್ಕೆ, ಆಶ್ರಯ, ಶಿಕ್ಷಣ, ಭೂ ಮಂಜೂರಾತಿ, ಸರ್ಕಾರಿ ಕಾಮಗಾರಿಗಳಲ್ಲಿ ಗುತ್ತಿಗೆ ನೀಡಿಕೆ ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡುತ್ತ ಬಂದಿದೆ.
ಬಿಜೆಪಿಯವರು ನಿಮಗೆ ಮೀಸಲಾತಿ ಹೆಚ್ಚಳ ಮಾಡಿದೆಂದು ಹೇಳಬಹುದು. ಆದರೆ ಅದು ಈ ವರೆಗೆ ಅನುಷ್ಟಾನಕ್ಕೆ ಬಂದಿಲ್ಲ. ಬರಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಹೆಚ್ಚಳ ಮಾಡುವುದಿದ್ದರೆ ಮೊದಲೇ ಮಾಡಬಹುದಿತ್ತು. ಚುನಾವಣೆ ಬಂದಾಗ ಆದೇಶ ಮಾಡಿದೆ ಅಷ್ಟೇ ಅನುಷ್ಟಾನಕ್ಕೆ ಬರಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಭರತ್ ರೆಡ್ಡಿ ಸವರ ಹಸ್ತದ ಗುರ್ತಿಗೆ ಮತ ನೀಡಿ ಎಂದು ಮನವಿ ಮಾಡಿದರು.

One attachment • Scanned by Gmail