ಬಾಪೂಜಿ ಉತ್ಸವ ಕಾರ್ಯಕ್ರಮ 

 ಹಿರಿಯೂರು.-ಹಿರಿಯೂರಿನ ಬಾಪೂಜೆ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ಕೂಲ್ ಆಫ್  ನರ್ಸಿಂಗ್ ಹಾಗೂ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜ್ ವತಿಯಿಂದ  ಏರ್ಪಡಿಸಿದ್ದ ಬಾಪೂಜಿ ಉತ್ಸವ-2022 ಕಾರ್ಯಕ್ರಮವನ್ನು  ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು, ಡಿ ಟಿ ಶ್ರೀನಿವಾಸ್ ರವರು ಶೈಕ್ಷಣಿಕವಾಗಿ ಒಳ್ಳೆಯ ಅಂಕಗಳನ್ನು ಪಡೆದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಿದರು ಸಂಸ್ಥೆಯ ಅಧ್ಯಕ್ಷರಾದ ಜಿ ಎಸ್ ಮಂಜುನಾಥ್ ಅವರು ಅಧ್ಯಕ್ಷತೆಯನ್ನ ವಹಿಸಿದ್ದರು. ಉದ್ಘಾಟನೆ ಮಾಡಿದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಶಿಕ್ಷಣದ ಮಹತ್ವ ಶಿಕ್ಷಣದ ಮೌಲ್ಯ ಹೆಣ್ಣು ಮಕ್ಕಳಿಗೆ ಎಷ್ಟು ಮುಖ್ಯ ಎಂದು ತಿಳಿಸಿದರು ಡಿ.ಟಿ ಶ್ರೀನಿವಾಸ್ ರವರು  ಮಾತನಾಡಿ ಇಂದಿನ ದಿನಗಳಲ್ಲಿ ಯಾವುದೇ ಅನುದಾನಗಳಿಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟ ಅದರಲ್ಲಿಯೂ ಇಂತಹ ಗ್ರಾಮೀಣ ಭಾಗದಲ್ಲಿ ಕಡಿಮೆ ಶುಲ್ಕದಲ್ಲಿ ಇಂತಹ ಒಂದು ವ್ಯವಸ್ಥೆಯನ್ನು ಮಾಡಿರುವುದು ಜಿಎಸ್ ಮಂಜುನಾಥ್ ಅವರ ಸೇವೆಗೆ ನಾವು ಮೆಚ್ಚಲೇಬೇಕು, ಎಂದು ತಿಳಿಸಿದರು. ಅಧ್ಯಕ್ಷರಾದ  ಜಿಎಸ್ ಮಂಜುನಾಥ್ ರವರು ಮಾತನಾಡಿ ಶಾಸಕರು ನಮ್ಮ ಸಂಸ್ಥೆಗೆ ಬಂದು ನಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ನೀಡಿದ ಉಪಯುಕ್ತ  ತಿಳುವಳಿಕೆ ಒಳ್ಳೆಯ ಮಾಹಿತಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ತುಂಬಾ ಸಂತೋಷ ಎಂದು ತಿಳಿಸಿದರು. ಹಾಗೂ ಅವರ ಅಮೂಲ್ಯವಾದ  ಸಮಯವನ್ನು ನಮಗಾಗಿ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಮೀಸಲಿರಿಸಿದ್ದಕ್ಕಾಗಿ ತುಂಬು ಹೃದಯ ಧನ್ಯವಾದಗಳನ್ನು ಹೇಳಿದರು. ಡಿವೈಎಸ್ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಕೆ ಆರ್ ರಾಘವೇಂದ್ರ, ಪೌರಾಯುಕ್ತ ಡಿ ಉಮೇಶ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅನೇಕ ಅಧಿಕಾರಿಗಳು ಮತ್ತು ಯುವ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.