
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.18: ಇಲ್ಲಿ ಬಾಪೂಜಿ ನಗರದಲ್ಲಿ ಪಿಯು ಕಾಲೇಜು ಮಾಡಲು ಪ್ರಸ್ತಾವನೆ ಇದ್ದು. ಮುಂದಿನದಿನದಲ್ಲಿ ಪಿಯು ಕಾಲೇಜು ಇಲ್ಲಿ ಆರಂಭಿಸುವುದು ಖಚಿತ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಅವರು ಇಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಯೋಜನೆಯಡಿ ಇಲ್ಲಿನ ಬಾಪೂಜಿನಗರದ ಹೈಸ್ಕೂಲ್ ನಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾಗಿದ್ದರ ಬಗ್ಗೆ ಮಾಹಿತಿ ಇದೆ. ಅದನ್ನು ಡೆಮಾಲಿಸ್ ಮಾಡಿ ಹೊಸದಾಗಿ ನಿರ್ಮಿಸಲಿದೆ. ಶಿಕ್ಷಣಕ್ಕೆ ನಮ್ಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಎಲ್ಲಾ ರೀತಿಯ ಆಧ್ಯತೆ ನೀಡಲಿದೆಂದು ತಿಳಿಸಿದರು.
ಸದೃಡ ಆರೋಗ್ಯ ಇದ್ದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ, ರಕ್ತ ಹೀನತೆ ಕಡಿಮೆ ಮಾಡಲು ಮೊಟ್ಟೆ ಸೇವನೆ ಉತ್ತಮವಾಗಿದೆ. ಇದನ್ನು ಸೇವಿಸದಿದ್ದವರು ಚಿಕ್ಕಿ, ಬಾಳೆ ಹಣ್ಣನ್ನು ತಿನ್ನಲು ನೀಡಲಿದೆಂದರು.
ಇಲ್ಲಿ ಒಂದು ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾನು ಸ್ವಂತ ವೆಚ್ಚದಲ್ಲಿ ಮಾಡಿ, ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಿದೆ. ಎಲ್ಲರೂ ಸಂತೋಷದಿಂದ ಒಂದು ದಿನ ಕಳೆಯೋಣ ಎಂದರು.
ಸಮಾರಂಭದಲ್ಲಿ ಮೇಯರ್ ಡಿ. ತ್ರಿವೇಣಿ, ಉಪ ಮೇಯರ್ ಜಾನಕಿ, ಕಾರ್ಪೊರೇಟರ್ ಗಳಾದ ಉಮಾದೇವಿ, ರಾಮಾಂಜನೇಯಲು ಮುಖಂಡರಾದ ಶಿವರಾಜ್, ಹೆಚ್.ಸಿದ್ದಣ್ಣ, ರಾಮಕೃಷ್ಣ, ಎಲ್ಲಪ್ಪ. ವೆಂಕಟೇಶ್, ದಾಸ್, ಇಮಾಮ್ ಸೇರಿ ಹಲವರು ಇದ್ದರು.