ಬಾಪು ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ್‍ರಿಗೆ ಗ್ಲೋಬಲ್ ಟೀಚಿಂಗ್ ಎಕ್ಸಿಲೆನ್ಸ ಪ್ರಶಸ್ತಿಯ ಗರಿ

ಬೀದರ:ಜ.11: ಬೀದರ ಜಿಲ್ಲೆಯ ಪ್ರಸ್ತಿಷ್ಟಿತ ಸಂಸ್ಥೆಯಾದ ಬಾಪು ಗ್ರಾಮೀಣ ಅಭಿವೃದ್ದಿ ಸಂಸ್ಥೆಯು 2007ನೇ ಸಾಲಿನಿಂದ ಇಲ್ಲಿಯವರೆಗೆ, ರಾಷ್ಟ್ರಪಿತಾ ಗಾಂಧೀಜಿಯವರ ಕನಸಿನ್ ಗ್ರಾಮ ರಾಜ್ಯದಲ್ಲಿ ರಾಮರಾಜ್ಯದ ಧೇಯದೊಂದಿಗೆ ಸತತವಾಗಿ ಕೃಷಿ ಅಭಿವೃದ್ದಿ, ಶಿಕ್ಷಣ ಹಾಗೂ ಗ್ರಾಮೀಣ ಮಹಿಳಾ ಮತ್ತು ನಿರುದ್ಯೋಗಿ ವಿದ್ಯಾಂವತ ಯುವಕರಿಗಾಗಿ ಉದ್ಯೊಗ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮಾಡುತ್ತಿರುವ ಸತತ ಹಾಗೂ ನಿರಂತರ ಕಾರ್ಯವನ್ನು ಪರಿಗಣಿಸಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕಾಶಿನಾಥ ಪಾಟೀಲ್‍ರಿಗೆ ದಿನಾಂಕ: 27-12-2020 ರಂದು ನವದೆಹಲಿಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ “ಗ್ಲೋಬಲ ಟೀಚಿಂಗ್ ಎಕ್ಸಿಲೆನ್ಸ ಪ್ರಶಸ್ತಿ” ನೀಡಲಾಯಿತು.
ಈ ಕಾರ್ಯಕ್ರಮವನ್ನು ಡಾ|| ಎಚ್.ಕೆ ಸರಧನ್ ಮುಖ್ಯ ಸಂಸ್ಶೋಧಕರು ಸಿ.ಎಸ್.ಐ.ಓ ಚಂಡಿಗಡ್ ರವರು ಮುಖ್ಯ ಅಥಿತಿಗಳಾಗಿ ಬಂದು ಸದರಿ ಸಭೆಯಲ್ಲಿ ಪಾಲ್ಗೊಂಡು ಹಿತ ವಚನಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.