ಬಾನೆಟ್ ಮೇಲೆ ಎಳೆದೊಯ್ದ ಯುವಕ ಲೈಂಗಿಕ ದೌರ್ಜನ್ಯದಡಿ ಸೆರೆ

ಬೆಂಗಳೂರು,ಜ.20- ಕಾರಿನ ಬಾನೆಟ್ ಮೇಲೆ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಆತನನ್ನೇ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಹಾಗೂ ಪ್ರಿಯಾಂಕಾ ಇಬ್ಬರೂ ಪ್ರತ್ಯೇಕವಾಗಿ ಕಾರು ಚಲಾಯಿಸುತ್ತಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಸಾರದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರಿನ ಚಾಲಕಿಯ ಮೇಲೆ ಎರಡೆರಡು ಪ್ರಕರಣ ದಾಖಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣೆ ಯಲ್ಲಿ ಇಬ್ಬರ ಮೇಲೂ ದೂರು ಪ್ರತಿದೂರು ದಾಖಲಾಗಿದ್ದು, ಕಾರು ಚಾಲಕಿ ಮೇಲೆ ಕೊಲೆಯತ್ನ ಹಾಗೂ ನಿರ್ಲಕ್ಷ್ಯ ತನದ ಡ್ರೈವಿಂಗ್ ನಡಿ ಪ್ರಕರಣ ದಾಖಲಿಸಲಾಗಿದೆ. ದರ್ಶನ್ ಮೇಲೆ ಹಲ್ಲೆ ಮತ್ತು ಗಲಭೆ ಮಾಡಿ ಕಾರು ಧ್ವಂಸ ಕೇಸ್ ನಡಿ ಪ್ರಕರಣ ದಾಖಲಿಸಲಾಗಿದೆ.
ಮೆಡಿಕಲ್ ಟೆಸ್ಟ್ ಮುಗಿಸಿಕೊಂಡು ಮನೆಗೆ ಪ್ರಿಯಾಂಕಾ ಹಾಗೂ ಪ್ರಮೋದ್ ಹಿಂದಿರುಗುತ್ತಿದ್ದರು. ಆ ಸಂದರ್ಭದಲ್ಲಿ ಗಾಡಿ ಮುಖಾಮುಖಿ ಡಿಕ್ಕಿಯಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಾತಿನ ಚಕಮಕಿ ನಡೆದು ದರ್ಶನ್‍ನನ್ನು ಮಹಿಳೆ ಎಳೆದುಕೊಂಡು ಹೋಗಿದ್ದಾಳೆ. ಕಾರಿನ ಬಾನೆಟ್ ಮೇಲೆ ಇದ್ದಾಗ ಪ್ರಿಯಾಂಕಾ ಕಾರು ಚಲಾಯಿಸಿದ್ದಾಳೆ.
ಕಾರು ನಿಲ್ಲಿಸಿದ ಮೇಲೆ ಪ್ರಿಯಾಂಕ, ನಿತೀಶ್ ಮೇಲೆ ಹಲ್ಲೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ದೂರಿನಲ್ಲೇನಿದೆ:
ಪೊಲೀಸರು ಠಾಣೆಗೆ ಬರಲು ಹೇಳಿದರೂ ಅಲ್ಲಿದ್ದ ವ್ಯಕ್ತಿಗಳು ಕಾರಿನ ಗ್ಲಾಸ್ ಒಡೆದರು. ಅಲ್ಲದೆ ಕಾರು ಚಲಾಯಿಸಲು ಮುಂದಾದಾಗ ಕಾರನ್ನು ಹಿಂಬಾಲಿಸಿಕೊಂಡ ಬಂದ ವ್ಯಕ್ತಿ ಅಡ್ಡಗಟ್ಟಿ ಜಖಂಗೊಳಿಸಲು ಪ್ರಯತ್ನಿಸಿದರು. ನಮ್ಮನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಕಾರಿನ ಬಾನೆಟ್ ಮೇಲೆ ನೆಗೆದು ಕುಳಿತುಕೊಂಡನು.
ನಮಗೆ ಭಯವಾಗಿ ಕಾರು ಚಲಾಯಿಸಿಕೊಂಡು ಹೋದೆವು. ಆದರೂ ಆತ ಕೆಳಗೆ ಇಳಿದಿಲ್ಲ. ಇದನ್ನು ನೋಡಿ ಕೆಲವರು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಸ್ವಲ್ಪ ದೂರ ಹೀಗಿ ನಿಲ್ಲಿಸಿದೆವು. ನಂತರ ಕಾರು ಮುಂದೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂಬಾಲಿಸಿಕೊಂಡು ಬಂದು ಕಾರು ಜಖಂಗೊಳಿಸಿದರು. ಅಲ್ಲದೆ ಸ್ನೇಹಿತ ನಿತೀಶ್ ಮೇಲೂ ಹಲ್ಲೆ ನಡೆಸಿದ್ದು, ಸಾಯಿಸುವುದಾಗಿ ಬೆದರಿಕೆ ಹಾಕಿದರು. ನಂತರ ಪೊಲೀಸರು ಠಾಣೆಗೆ ಕರೆದೊಯ್ದರು ಎಂದು ಪ್ರಿಯಾಂಕಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.