ಬಾದುಷಾ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು
ತುಪ್ಪ: ಎರಡು ಚಮಚ
ಮೊಸರು: ಮೂರು ಚಮಚ
ಬೇಕಿಂಗ್ ಸೋಡಾ: ಕಾಲು ಚಮಚ
ಉಪ್ಪು: ಕಾಲು ಚಮಚ
ಕೇಸರಿ: ಸ್ವಲ್ಪ
ಮೈದಾ ಹಿಟ್ಟು: ಒಂದು ಕಪ್‌
ಸಕ್ಕರೆ : ಒಂದೂಕಾಲು ಕಪ್
ಏಲಕ್ಕಿ: ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ (ಪಾಕ ಮಂದವಾಗಿರಲಿ) ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಕೂಡ ಹಾಕಿರಿ.
ಒಂದು ಬೌಲ್‌ಗೆ ತುಪ್ಪ ಹಾಕಿ. ಮೊಸರು ಸೇರಿಸಿ ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಕಪ್ ಮೈದಾ ಹಾಕಿ, ಕೇಸರಿ ಹಾಕಿ ಮಿಶ್ರ ಮಾಡಿ. ಈಗ ಚೆನ್ನಾಗಿ ಕಲೆಸಿ, ಮಿಶ್ರಣ ಕೈಗೆ ಅಂಟುವಂತೆ ಇರಬಾರದು. ಈಗ ಅದರಿಂದ ಚಿಕ್ಕ ಉಂಡೆ ಕಟ್ಟಿ ಕೈಯಲ್ಲಿ ತಟ್ಟಿ. ಈಗ ಅದರ ಮಧ್ಯ ತೂತ ಮಾಡಿ. ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ಮೇಲೆ ಕೈಯಲ್ಲಿ ಉಂಡೆಯನ್ನು ತಟ್ಟಿ-ತಟ್ಟಿ ಹಾಕಿ, ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕಕ್ಕೆ ಹಾಕಿಡಿ. ಇಪ್ಪತ್ತು ನಿಮಿಷ ಕಳೆದ ಮೇಲೆ ಪಾಕದಿಂದ ತೆಗೆದರೆ ಬಾದೂಷಾ ರೆಡಿ.