ಬಾದಾಮಿ ಪಾಯಸ

ಬೇಕಾಗುವ ಸಾಮಗ್ರಿಗಳು

  • * ಶಾವಿಗೆ – ೩ ಚಮಚ
  • * ಸಪ್ಪೆ ಖೋವಾ – ೩ ಚಮಚ
  • * ಕುಂಕುಮ ಕೇಸರಿ – ೨ ಎಸಳು
  • * ಏಲಕ್ಕಿ ಪುಡಿ – ೧ ಚಮಚ
  • * ತುಪ್ಪ – ೧ ಚಮಚ
  • * ಬಾದಾಮಿ – ೧೦
  • * ಹಾಲು – ೧/೨ ಲೀಟರ್
  • * ಸಕ್ಕರೆ – ೫ ಚಮಚ
  • * ಒಣದ್ರಾಕ್ಷಿ – ೧೦ – ೧೫
  • * ಗೋಡಂಬಿ – ೧೦

ಮಾಡುವ ವಿಧಾನ:
ಬಾಣಲಿಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಕಾಯಿಸಿ, ಬಿಸಿತುಪ್ಪಕ್ಕೆ ಶಾವಿಗೆ, ಸ್ವಲ್ಪ ಗೋಡಂಬಿ, ಒಣದ್ರಾಕ್ಷಿ ಹಾಕಿ ಹದವಾಗಿ ಹುರಿದುಕೊಳ್ಳಿ. ಬಾದಾಮಿ, ಉಳಿದ ಗೋಡಂಬಿ ಹಾಗೂ ಖೋವಾ ಸೇರಿಸಿ ನುಣ್ಣಗೆ ರುಬ್ಬಿ. ಕಾಯಿಸಿದ ಹಾಲಿಗೆ ಹಾಕಿ ಮಿಕ್ಸ್ ಮಾಡಿ. ಹುರಿದ ಶಾವಿಗೆಯನ್ನು ಸೇರಿಸಿ ಕುದಿ ಬಂದಮೇಲೆ ಒಲೆಯಿಂದ ಇಳಿಸಿ ತಂಪು ಮಾಡಿದರೆ ರುಚಿಯಾದ ಬಾದಾಮಿ ಪಾಯಸ ಸವಿಯಲು ಸಿದ್ಧ.