ಬಾದಾಮಿ ಕ್ರಂಬಲ್ ಮತ್ತು ಅವಕಾಡೊ ಚಾಟ್

ಬೇಕಾಗುವ ಪದಾರ್ಥಗಳು
ತೆಳು ಬಾದಾಮಿ ಚೂರುಗಳು
ಕಡಲೆಪುರಿ
ಆವಕಾಡೊ
ಚಾಟ್ ಮಸಾಲ 4 ಟೀಸ್ಪೂನ್
ಉಪ್ಪುರುಚಿಗೆ ತಕ್ಕಷ್ಟು
ಹೆಚ್ಚಿದ ತಾಜಾ ಕೊತ್ತಂಬರಿ ಸೊಪ್ಪು
ನಿಂಬೆ ರಸ
ಸಣ್ಣಗೆ ಹೆಚ್ಚಿದ ಕೆಂಪು ಈರುಳ್ಳಿ
ಬೀಜ ತೆಗೆದು ಸಣ್ಣಗೆ ಹೆಚ್ಚಿದ ಟೊಮೆಟೊ
ಪುಡಿಮಾಡಿದ ಕರಿಮೆಣಸು
ಮಾಡುವ ವಿಧಾನ:
ಪ್ರಿ-ಹೀಟ್ ಮಾಡಿದ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 4 ನಿಮಿಷಗಳ ಕಾಲ ಅಥವಾ ಹೊಂಬಣ್ಣ ಬರುವವರೆಗೆ ಬಾದಾಮಿ ಫ್ಲೇಕ್ಸ್ ಅನ್ನು ರೋಸ್ಟ್ ಮಾಡಿ. ಅದನ್ನು ಪುಡಿಮಾಡಿ ಮತ್ತು ಉಪ್ಪು ಮತ್ತು ಕರಿಮೆಣಸಿನಪುಡಿಗಳೊಂದಿಗೆ ಬೆರೆಸಿ.
ಆವಕಾಡೊವನ್ನು ಮಧ್ಯಕ್ಕೆ ಕತ್ತರಿಸಿ ಸಿಪ್ಪೆ ಮತ್ತು ಬೀಜವನ್ನು ತೆಗೆಯಿರಿ. ಹಣ್ಣುಗಳನ್ನು ಚೌಕಗಳಂತೆ ಸಣ್ಣ ತುಂಡುಗಳಾಗಿ ಕತ್ತರಿಸಿ.
ಒಂದು ಪಾತ್ರೆಯಲ್ಲಿ, ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮ್ಯಾಟೊ ತೆಗೆದುಕೊಂಡು ಚೌಕವಾಗಿ ಕತ್ತರಿಸಿದ ಆವಕಾಡೊ, ಕಡಲೆಪುರಿ, ಚಾಟ್ ಮಸಾಲ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದೊಂದಿಗೆ ಬೆರೆಸಿ. ಅದನ್ನು ಚೆನ್ನಾಗಿ ಟಾಸ್ ಮಾಡಿ.
ಬಡಿಸುವ ಮೊದಲು, ಸರ್ವಿಂಗ್ ಬೌಲ್‌ನಲ್ಲಿ ಸಲಾಡ್ ಅನ್ನು ಹಾಕಿ ಅದರ ಮೇಲೆ ಹುರಿದು ಪುಡಿಮಾಡಿದ ಬಾದಾಮಿ ಫ್ಲೇಕ್ಸ್‌ನಿಂದ ಅಲಂಕರಿಸಿ.