ಬಾದಾಮಿಯಿಂದ ಮತ್ತೆ ಸಿದ್ದರಾಮಯ್ಯ ಸ್ಫರ್ಧಿಸಲಿ

ಗುಳೇದಗುಡ್ಡ ನ.25- ಹಿಂದೆಂದು ಅಭಿವೃದ್ದಿ ಕಾಣದ, ಬಾದಾಮಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ಹೊಳೆಯನ್ನೇ ಹರಿಸಿ, ಕ್ಷೇತವನ್ನು ಅಭಿವೃದ್ದಿಗೊಳಿಸಿದ ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೇ ಬಾದಾಮಿ ಮತಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ ಪಕ್ಷದ ಪರಿಶಿಷ್ಠ ಘಟಕದ ಉಪಾಧ್ಯಕ್ಷ ಗೋಪಾಲ ಜಾಧವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರು, ಎಲ್ಲ ಜನಾಂಗ ಒಳಗೊಂಡು ಎಲ್ಲ ಸಮುದಾಯಗಳ ಅಭಿವೃದ್ಧಿಯ ಹರಿಕಾರ. ಅವರು ಈ ಹಿಂದೆ ಎಂದು ಕಾಣದಷ್ಟು ಬಾದಾಮಿ ಮತಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ, ರಾಜ್ಯದಲ್ಲಿ ಈ ಕ್ಷೇತ್ರವನ್ನು ಮಾದರಿಯನ್ನಾಗಿಸಿದ್ದಾರೆ. ಅವರು ಮತ್ತೇ ಬಾದಾಮಿ ಮತಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಅದಕ್ಕಾಗಿ ಸಿದ್ದರಾಮಯ್ಯ ಅವರು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು.
ಕೆರೂರು, ಬಾದಾಮಿ ಹಾಗೂ ಗುಳೇದಗುಡ್ಡ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಶಾಲೆ, ರಸ್ತೆ, ಕಾಲೇಜು, ನೀರಾವರಿ, ಸಮುದಾಯ ಭವನಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಅದಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಸ್ಪರ್ಧಿಸಿ ಗೆದ್ದು, ಈ ಭಾಗದಿಂದಲೇ ಸಿದ್ದರಾಮಯ್ಯನವರು ಮತ್ತೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಕಾಂಗ್ರೆಸ ಪಕ್ಷದ ಪರಿಶಿಷ್ಠ ಘಟಕದ ಉಪಾಧ್ಯಕ್ಷ ಗೋಪಾಲ ಜಾಧವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಕೈಲಾಸ ಕುಂಬಾರ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಗೌಡರ, ಹಂಗರಗಿ ಪಿಕೆಪಿಎಸ್ ಸದಸ್ಯ ಶ್ರೀಧರ ಮೇಟಿ, ಬಸವರಾಜ ದಳವಾಯಿ, ಕುಮಾರ ಲಮಾಣಿ, ಪರಶುರಾಮ ಮಾದರ, ಫಕೀರಪ್ಪ ತಳವಾರ, ಯಲ್ಲಪ್ಪ ಮನ್ನಿಕಟ್ಟಿ, ಯಮನಪ್ಪ ಗೌಡರ, ದ್ಯಾಮಣ್ಣ ಗೌಡರ, ಕಲ್ಲನಗೌಡ ಗೌಡರ ಮತ್ತಿತರರಿದ್ದರು.