ಬಾದಲಗಾಂವ ಸರ್ಕಾರಿ ಶಾಲೆಗೆ ಶಾಸಕ ಚವ್ಹಾಣ ಭೇಟಿ

ಔರಾದ :ಜು.16: ತಾಲೂಕಿನ ಬಾದಲಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಜಿ ಸಚಿವ ಔರಾದ ಶಾಸಕ ಪ್ರಭು ಚವ್ಹಾಣ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಶಾಸಕರಾಗಿ ಆಯ್ಕೆಯಾದ ಮೇಲೆ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು ಶಾಲೆ ಸ್ವಚ್ಛತೆ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಚರ್ಚೆ ನಡೆಸಿ ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು. ಶಾಲೆಯ ಮೇಲ್ಛಾವಣಿಯಿಂದ ಮಳೆಗಾಲದಲ್ಲಿ ನೀರು ಬರುತ್ತಿವೆ ಎಂದು ಮಕ್ಕಳು ಹಾಗೂ ಶಿಕ್ಷಕರು ಚವ್ಹಾಣ ಅವರ ಗಮನಕ್ಕೆ ತಂದರು. ಶೀಘ್ರದಲ್ಲೇ ಮೇಲ್ಛಾವಣಿ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು

ಈ ಸಂದರ್ಭದಲ್ಲಿ ಮುಖ್ಯಗುರು ಮಾರತಾಬಾಯಿ, ಶಿಕ್ಷಕರಾದ ಸುರೇಶ ಕಾಳೆ, ಗೋವಿಂದ ಜಾಧವ, ಪ್ರಭಾವಿ, ಜಯಶ್ರೀ, ಮಿನಾಕುಮಾರಿ, ಜಗದೇವಿ, ಕಮಲ ಸೇರಿದಂತೆ ಎಸ್ ಢಿ ಎಮ್ ಸಿ ಅಧ್ಯಕ್ಷ ರಾಮದಾಸ ಪಾಟೀಲ, ಮಂಡಲ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಯುವ ಮುಖಂಡ ಸಚಿನ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.